Monday, February 7, 2011

ನಿರೀಕ್ಷೆ


ನೀ ನನ್ನೆದುರಿದ್ದಾಗ
ನೋಡಿದೆ, ಮುಗುಳ್ನಕ್ಕಿದೆ, ಮಾತನಾಡಿಸಿದೆ

ನೀ ಮರೆಯಾದಾಗ
ಕಾಡಿದೆ, ಕಣ್ಣೀರಿಟ್ಟಿದೆ,ಪರಿತಪಿಸಿದೆ

       ನಿನ್ನ ಹುಡುಕಾಟದಿ
      ಕಣ್ಣುಗಳು ಕಾಲವಾಗುತ್ತಿವೆ
     ಕನಸುಗಳು ನಲುಗುತ್ತಿವೆ
    ನಿರೀಕ್ಷೆಗಳು ನಾಶವಾಗುತ್ತಿವೆ
    ದಿನವು ಪರೀಕ್ಷೆಗಳು ಎದುರಾಗುತ್ತಿವೆ

 ನೀ  ಬರಬಾರದೆ
   ಮನಸು
  ಮಾಸುವ ಮೊದಲು
    ಕನವರಿಕೆಯಲ್ಲಿ
    ಕೊರಗುವ ಮೊದಲು
    ಕಸುವು ಕಾಯವ
   ಕಳಚುವ ಮೊದಲು

    ನಿನ್ನ ಕಾಯುವುದು ಕಷ್ಟವಾದರು
     ಇಷ್ಟಕ್ಕೆ ಮಣಿಯಬೇಕಲ್ಲಾ
      ಪ್ರೀತಿ ನಷ್ಟವಾದರು ಪುಟ್ಟ ಈ ಹೃದಯ
     ಸುಮ್ಮನೆ ಕ್ಷಿಣಿಸಬೇಕಾಗುತ್ತಲ್ಲಾ