Friday, July 20, 2012

ಮುಳ್ಳು


ಎಲ್ಲೋ ಸಿಕ್ಕ ಪ್ರೀತಿಯ
 ಬೀಜವನ್ನು
"ಹೂ" ವಾಗುತ್ತದೆ 
ಎಂದು ಬಿತ್ತಿದೆ

ಪ್ರೇಮ,ಅನುರಾಗದ
ಧಾರೆಯೆರದು
 ಪೋಷಿಸಿ ಬೆಳೆಸಿದೆ

ಮುಂದೊಂದು ದಿನ
 ನೀ ನನ್ನಾಸೆಯ
 ಹೂ ಆಗುತ್ತಿಯೆಂದು

ಆದರೆ ನೀ
 ವಿಷದ "ಮುಳ್ಳು" 
ಆಗುತ್ತಿಯ  
ಎಂದು ಕೊಂಡಿರಲಿಲ್ಲ .....

Tuesday, July 17, 2012

ನಿರುದ್ಯೋಗದ ಬೀತಿ


ಮನ್ನಿಸಲು ನಾ ಯಾರು ಗೆಳತಿ
ನೀ ಮಾಡಿದ ತಪ್ಪಾದರೂ ಏನು ?
ತಪ್ಪು ನಿನ್ನದಲ್ಲ ,ನನ್ನದು ಅಲ್ಲ
ಸದ್ಯದ ಪರಿಸ್ತಿತಿ ಇರುವುದೇ ಈಗಲ್ಲ

ಸಂತಸ ಪಡಲು ಇದು  ಬಾಲ್ಯವಲ್ಲ
ಮರುಗಲು ಮುಪ್ಪಿನ್ನು ಬಂದಿಲ್ಲ

ಜೀವನವ ನಿರ್ಧರಿಸುವ ಘಟ್ಟವಿದು
ದಾರಿ  ತಪ್ಪಿದರೆ ಮುಂದೆಂದು
 ಏನೂ ಕಾಣದು
ಜಾರಿ ಬಿದ್ದರೆ ಮೇಲೆತ್ತಲು
 ಯಾರು ಬರರು

ಗತಿಸಿದ ವಯಸ್ಸು ಇಪ್ಪತ್ಹೆಂಟು ೨೮
ಏರುವ ಮೆಟ್ಟಿಲುಗಳು ನೂರೆಂಟು ೧೦೮

ಮಾಡುವ ಕೆಲಸದಲ್ಲಿ ತೃಪ್ತಿ ಇಲ್ಲ
ಆದರೆ ಏನೂ ಮಾಡುವುದು
ದುಡ್ಡೀಗಾಗೆ ಪ್ರಾಮುಕ್ಯತೆ ಎಲ್ಲಾ

ಉದ್ಯೋಗ ದಲ್ಲಿ  ಭದ್ರತೆ ಕಾಣುತ್ತಿಲ್ಲ 
ಒಂದೆಡೆ ನೆಲೆ ನಿಲ್ಲಲು ಪರದಾಡ
 ಬೇಕಾಗಿದೆಯಲ್ಲಾ

ನನ್ನ ನಿರೀಕ್ಷೆ ಗಳು ತಲುಪಿಲ್ಲ
ಅಪ್ಪನ ಮನ ಒಪ್ಪುತ್ತಿಲ್ಲ
ಅಮ್ಮನ ಕೊರಗು ನಿಂತಿಲ್ಲ

ಏನೂ ಮಾಡುವುದು ಎಂದು
ತಿಳಿಯುತ್ತಿಲ್ಲ
ಎಲ್ಲೆಡೆ ನಿರುದ್ಯೋಗದ ಬೀತಿ
ಕಾಡುತಿದೆಯಲ್ಲ..

Friday, July 13, 2012

ನೆಮ್ಮದಿಯ ಜೀವನ

 
ಸುಂದರ ಬದುಕಿನ
ಆಲೋಚನೆಯಲ್ಲಿ
ನಾಳಿನ ದಿನಗಳ
ಎಣಿಕೆಯಲ್ಲಿ

ಅಂತರಾಳದ
 ಬಾವನೆಗಳೊಂದಿಗೆ
ವಾತ್ಸಲ್ಲ್ಯದ
ಮದುರತೆಯಿರಲಿ

ಹಿರಿಯ ಕಿರಿಯರೊಂದಿಗೆ
ಗೌರವ,ನಂಬಿಕೆ
ಸಂಬಂದಗಳಲ್ಲಿ
ಪ್ರೀತಿ,ವಿಶ್ವಾಸ
ಬೆಳೆಯುತಿರಲಿ
 
ಸ್ವಾರ್ಥ,ಬಿಗುಮಾನದ
ವರ್ತನೆ ಬದಿಗಿರಲಿ
ನಾನು ನನ್ನದು ಎಂಬ
 ಅಹಂಕಾರವಿರದಿರಲಿ

ಬಾಳ ಪಯಣದಲಿ
 ಸುಖ ದುಃಖಗಳೊಂದಿಗೆ
ಸಮತೋಲನದಿ
 ನೆಮ್ಮದಿಯ ಜೀವನ
ನಮ್ಮದಾಗಿರಲಿ

Monday, July 9, 2012

ಅಭಿಪ್ರಾಯ

 
ನಾ ಬರೆದ ಕವನಗಳು
ಪ್ರೀತಿಯ ವಿಷಯದಲ್ಲಿ
ಕೆಲವು ಸಾಲುಗಳು
ನನ್ನ ಬಾವನೆಗಳಲ್ಲ

ನನ್ನ ಕಾಲೇಜು ದಿನಗಳಲ್ಲಿ
ಗೆಳೆಯ/ತಿ ಯರ ಜೀವನದಲ್ಲಿ 
 ನಡೆದ ಪ್ರೇಮ ಪ್ರಸಂಗದ
 ಸಿಹಿ ಕಹಿ ಮಜಲುಗಳೆಲ್ಲ

ನಮ್ಮ ಸುತ್ತ ಮುತ್ತಲಿನ 
ಪರಿಸರದಿ
 ನಡೆಯುವ ರೀತಿ ನೀತಿ
 ಪಜೀತಿಯ ಜಂಜಾಟಗಳೆಲ್ಲ

ಈ ಸಮಾಜದಲ್ಲಿ 
ನಡೆಯುತ್ತಿರುವ
ವಾಸ್ತವಿಕ
 ಚಿತ್ರಣದ ಅಂಶಗಳೆಲ್ಲ 
 
ಈ ಎಲ್ಲಾ  ಘಟನೆಗಳ ಸುತ್ತ
 ನನ್ನಲ್ಲಿ ಮೂಡಿದ
ವೈಯಕ್ತಿಕ ಅಭಿಪ್ರಾಯಗಳೆಲ್ಲ .

Monday, July 2, 2012

ಸಾರ್ಥಕಬದುಕು


ಬಾವನೆಗಳು ಬದಲಾಗುತ್ತಿದೆ
ಮನಸಿನ
ಬೇಡಿಕೆಗಳು,ಮುಂದಿಟ್ಟಂತೆ

ಚಂಚಲ ಮನಸು ಕಾಲಕ್ಕೆ 
ಸರಿಯಾಗಿ ಸ್ತಿರವಾಗುತ್ತಿದೆ
 ನಿಂತ ನೀರಿನಂತೆ

ಜೀವನದ ಬೆಳವಣಿಗೆಗೆ ತಕ್ಕಂತೆ
ಹೃದಯ
ಎಚ್ಚರಗೊಳಿಸುತ್ತಿದೆ
ಶಬ್ದ ತರಂಗಗಳಂತೆ

ಈ ಸಂಘರ್ಷ ಸಮಾಜದಲ್ಲಿ
ಪರಸ್ಪರ ಸಹಬಾಳ್ವೆ ಬೇಕು
ಜೀನಿನ ಗೂಡಿನಂತೆ

ಬಾಳಿಗೊಂದು ನಂಬಿಕೆ ಅರ್ಥ
ಬರಲು ಇರಬೇಕು
ಜೀವನೋತ್ಸಹ ,ಪರಿಶ್ರಮ
ಸಾಧನೆ ಛಲದಂತೆ

ಬದುಕು ಸಾರ್ಥಕವಾಗಲು
 ದುಡಿಮೆಯ ಜೊತೆಗೆ ಬೇಕು
ಹೆತ್ತವರ ಅರ್ಶಿವಾದ,ಕೃಪೆಯೊಂದು
ಮತ್ತು ಅರ್ಥ ಮಾಡಿಕೊಳ್ಳುವ
 ಸಂಗಾತಿಯ ಮನಸೊಂದು .
  

ಹೂವು

 
ಹೂವಿನ ತೋಟದಲಿ ನಿಂತಿರುವೆ ನಾನು
ಇದರಲ್ಲಿ ಯಾವ ಹೂವು
ನನ್ನದೆಂದು ತಿಳಿಯದಿರೆನು

ಯಾವ ಹೂವು ಯಾರ ಮುಡಿಗಾದರೇನು
ಇದರಲ್ಲಿ ನನಗಾಗಿಯೇ
ಒಂದು ಹೂವು ಕಾಯುತಿರಬಹುದೇನೋ
ದೇವರ ಪೂಜೆಗೆ ಭಕ್ತಿಯ
  ಹಾರವಾದರೇನು
ಮಸಣದಲ್ಲಿ ಗೋರಿಯ ಮೇಲಿಡುವ ಬಿಡಿ
ಹೂವಾದರೇನು 

ಮಲ್ಲಿಗೆಯ ಸುವಾಸನೆಯಾದರೇನು
ಗುಲಾಬಿಯ ಅಂದವಾದರೇನು
ಸೇವಂತಿಗೆಯ ರಂಗು ರಂಗಾದರೇನು
 ಕೇದಿಗೆಯ ಕಂಪಾದರೇನು 
 
ಒಟ್ಟಿನಲ್ಲಿ
ನನ್ನ ಹೃದಯದ ಒಡತಿಯ
 ಅಂದದ ಮುಡಿಗೆ
ಚೆಂದವಾಗಿ ನೀ ಇರಬೇಕು ಅಸ್ಟೇ...!