Monday, August 27, 2012

ಉಡುಗೊರೆ



ಗೆಳೆತನದ ಜೊತೆ
 ಮಂದಸ್ಮಿತ
ಪ್ರೀತಿಯ ಜೊತೆ
ಗೌರವ
ಬಾವನೆಗಳ ಜೊತೆ
 ಸ್ಪಂದನೆ
ನಂಬಿಕೆಯ ಜೊತೆ
ಆತ್ಮವಿಶ್ವಾಸ
ನಿನ್ನ ಮುಗ್ಧ ಮನಸಿನ ಜೊತೆ
ನಾನು
ನನ್ನ ಸ್ನೇಹಕಿಂತ
ಮಿಗಿಲಾದ
ಉಡುಗೊರೆ ಬೇಕೇನು ?

Saturday, August 25, 2012

ನನ್ನ ಆತ್ಮದಲ್ಲಿ


ನಾ
ಇಲ್ಲದಿದ್ದರೂ ನೀನೆರುವೆ
ನೀನಿಲ್ಲದಿದ್ದರೆ ನಾ ಎಲ್ಲಿರುವೆ?

ನಿನ್ನ ಮೇಲಿರುವ ಪ್ರೀತಿ
ನನ್ನ ಹೃದಯದ ಗೂಡಿನಲ್ಲಿ
ಅದು ನೀ ತಿಳಿದರೂ ನೀನಿಟ್ಟೆ
ನಿನ್ನ ಕಾಲಡಿಯಲ್ಲಿ

ನಿನ್ನ ಹೆಸರನ್ನು ನನ್ನ ಉಸಿರಲ್ಲಿ
ಸದಾ ಹಸುರಾಗಿಸಿದೆ

ನನ್ನುಸಿರು ಹೋಗಿ ಮಣ್ಣಲ್ಲಿ
ಸಣ್ಣ ಕಣಗಲಾದರು
ಅಚ್ಹಳಿಯದೆ ನಿನ್ನೆಸರಿದೆ
ನನ್ನ ಆತ್ಮದಲ್ಲಿ

ಅರ್ಧಾಂಗಿ



ಕನಸಿನಲಿ ಕಂಡು
 ಮನಗಿಡಿಸಿದವಳು
ನನಸಾಗಿ ಬರುವಳೇ..?

ಕಣ್ಣುಗಳು ಕಾತುರದಿಂದ
ಕಾಯುತಿವೆ
ನಮ್ರತೆಯ ನಿರಾಭರಣ 
ಬಾಲೆಯನು

ಹುಡುಕುತಿಹ ಜೀವಕೆ
 ನನ್ನ ಮುಗ್ದತೆಯ
ಮನಸೇ  ಕಾರಣ

ಸಿಕ್ಕ ಮರು ಕ್ಷಣವೇ ನಮ್ಮ
 ನಂದ ಗೋಕುಲಕೆ
ಸಂತೋಷದ ಹಸಿರು ತೋರಣ

ನನ್ನ ಮನಸಿಗೆ 
ಮುಡುಪಾಗಿ
ಬಾವನೆಗಳಿಗೆ ಆಕರ್ಷಿಸುವ
ಗೆಳತಿಯಾಗಿ

ಈ ಹೃದಯದ ಬಡಿತಕ್ಕೆ
ಸ್ಪಂದಿಸುವವರು
ಯಾರು ಬರುವರೋ
 ನನ್ನ "ಅರ್ಧಾಂಗಿ"ಯಾಗಿ..?

ಹುಡುಗಾಟ



ಯೌವನದ ಅಲೆಯಲ್ಲಿ
ಮೋಜಿನಾಟ

ಬಾವನೆಗಳ ಮಿಲನಕೆ
ಹುಡುಕಾಟ

ಎಳೆಯ ಹೃದಯಗಳ
ಜೊತೆ ಚೆಲ್ಲಾಟ

ಮನಸಿನ ತುಮುಲಗಳ
 ಜೊತೆ
 ನಿರಂತರ  ಹೋರಾಟ

ಇದುವೇ 
ಪ್ರೀತಿ ಎಂಬ
ಮಾಯೆಯ ಹುಡುಗಾಟ

Thursday, August 23, 2012

ಮೊಳಕೆ


ಭಯದ ನೆರಳಿನಲಿ
ಪ್ರೀತಿಯ ಮೊಳಕೆ
ಮಧುರ ಮಾತುಗಳೇ ಮಂಜಿನ
 ಹನಿ ಚಿಗುರಿಗೆ

ಪ್ರತಿಯೊಂದು ಎಲೆಗಳೇ
ಸುಂದರ ಸ್ವಪ್ನಗಳು
ಸಹನೆ ಸಂಯಮವೇ
ಗಿಡದ ಬೆಳವಣಿಗೆ

ಆತ್ಮ ವಿಶ್ವಾಸ ,ನಂಬಿಕೆಯ 
ಪ್ರತಿಫಲವೇ ಹೂವು
ಸಂದೇಹ,ಅನುಮಾನಗಳೇ
ಹಾಳು ಮಾಡುವ
ಕ್ರಿಮಿ ಕೀಟಗಳು 

Wednesday, August 22, 2012

ಬೇಡಿಕೆ


ನಿನ್ನ ಮನಸಿನಲಿ ಪ್ರೀತಿ
ಮುಕ್ತವಾಗಿದ್ದರೆ
ನನ್ನ ಬಾವನೆಗಳನ್ನು
 ಹಂಚಿಕೊಳ್ಳಬಹುದೇ

ಪುಟ್ಟ ಹೃದಯದಲ್ಲಿ ಸ್ವಲ್ಪ
ಸ್ಥಳವಿದ್ದರೆ
ಪ್ರೀತಿಯ ಸೌಧವ ಕಟ್ಟಬಹುದೇ

ಅನುರಾಗದ ಲೋಕದಲ್ಲಿ
ಪುಷ್ಪದಂತಿರುವೆ
ದುಂಬಿಯಾಗಿ ಮಕರಂಧ
 ಹೀರಬಹುದೇ

ಏಕೋ ನಿನ್ನ ನೆನಪಲ್ಲಿ 
ಮನ ಮಿಡಿಯುತಿದೆ
ಪ್ರೀತಿಯ ಬೇಡಿಕೆ ಮಂಡನೆ
ಮಾಡಬಹುದೇ

ಮನಸೋ ಇಚ್ಚೆ ಹಾಡುವ
ನಿನ್ನ ಹಾಡಿಗೆ
ಪಲ್ಲವಿ ನಾನಾಗ ಬಹುದೇ ...?

Monday, August 20, 2012

ಹಾಫ್ ಟೀ,ಹಾಫ್ ಪ್ಲೇಟ್ ಉಪ್ಪಿಟ್



ಅಪ್ಪ ನೋಡಿದ್ ಅಮ್ಮ ಗೆ ಇಡ್ಸೋಲ್ಲ
ಅಮ್ಮ ಹೇಳಿದ್ ಅಪ್ಪ ಒಪ್ಪೋಲ್ಲ
ಇವರಿಬ್ಬರು ನೋಡಿದ್ ನಮಗೆ ಸೇರೋಲ್ಲ

ಪ್ರೀತಿ ಮಾಡಿದವಳು
ಕೈ ಕೊಡ್ತಾಳೆ
ಕೈ ಹಿಡಿದೊಳು ಬೇರೆ ಮನೆ
ಮಾಡು ಅಂತಾಳೆ

ಅತ್ತೆಗೆ ನಾನು ನನ್ ಮಗ
 ಎಂಬ ಆಹಂಕಾರ
ಸೊಸೆಗೆ  ನನ್ ಗಂಡ
ಎಂಬ ದುರಹಂಕಾರ

ಇವರಿಬ್ಬರ ಜಗಳ ನೋಡಿ
ಮಾವ ಮಠ ಬಿಟ್ ಮನೆ ಸೇರೋಲ್ಲ
ಮಗ ಬಾರ್ ಬಿಟ್ ಎದ್ದೆಳಲ್ಲ

ಹುಡುಗಿ ನೋಡೋಕ್ ಹೋಗಿ
ಇರೊ ಅರ್ಧ ಗಂಟೇಲಿ
ಹಾಫ್ ಟೀ,ಹಾಫ್ ಪ್ಲೇಟ್ ಉಪ್ಪಿಟ್
 ತಿನ್ನೋದ್ರೊಳಗೆ
ಅರ್ಧ ಜೀವನ ಜೊತೆಗೆ ಬಾಳೋಲ್ನ
ಹೇಗಪ್ಪ ದೇವ್ರೇ
ಅರ್ಥ ಮಾಡ್ಕೊಳೋದು ?

Friday, August 17, 2012

ಅನಾಥರು

 
 
 
ಬಿದ್ದೆವು  ನಾವು ಬೀದಿ ಬೀದಿಗಳಲ್ಲಿ
ಯಾರೋ ಮಾಡಿದ ತಪ್ಪಿಗಾಗಿ
ಬೆಳೆದೆವು ನಾವು ಜೊತೆ ಜೊತೆಯಾಗಿ
 ಒಡಹುಟ್ಟಿದವರಂತೆ
ನಿರಾಶ್ರಿತರ ಕೊಳಚೆ ಪ್ರದೇಶಗಳಲ್ಲಿ .

ಬಿಕ್ಷೆ ಬೇಡಿದೆವು ಮನೆ,ಮಾರ್ಕೆಟ್ ,ಬಸ್ಸು
ರೈಲು ನಿಲ್ದಾಣಗಳಲ್ಲಿ
ಬಿಡಿಗಾಸಿನಿಂದ ತುತ್ತು ಅನ್ನಕ್ಕಾಗಿ 
ಖುಷಿ ಇಂದ ತಿರುಗಾಡಿದೆವು ಮದುವೆ
ಮೆರವಣಿಗೆ,ಸಮಾರಂಭಗಳಲ್ಲಿ
ಎಂಜಲೆಲೆಯ ಮೃಷ್ಟನ ಭೋಜನಕ್ಕಾಗಿ 

ಅಪ್ಪ ಅಮ್ಮನ ಪ್ರೀತಿ ತೋರುವರು ಒಂದು  ದಿನದಲ್ಲಿ
ಶ್ರೀಮಂತರು ಸಮಾಜದಲ್ಲಿ
ತಮ್ಮ ಗೌರವ ಘನತೆಗಾಗಿ
ಹುಟ್ಟಿದ ದಿನವೇ ಗೊತ್ತಿರದ ನಾವು
ಸಂಭ್ರಮಿಸಿದೆವು
ಸಿಹಿ ತಿನ್ನುತ ಬೇರೆಯವರ
ಜನ್ಮ ದಿನಕ್ಕಾಗಿ

ಹಿಂದಿಲ್ಲ , ಮುಂದಿಲ್ಲ ಯಾರ ಹಂಗಿಲ್ಲದ
ನಮಗೆ ನಾವೇ ಸ್ವತಂತ್ರರು
ನೊಂದ ಜೀವವು ಧಣಿದು ಮರುಗಿದಾಗ
ಯಾರಿಲ್ಲದ ನಾವು
 ಬದುಕಿನಲ್ಲಿ ಅತಂತ್ರರು

ಸಂಬಂದಗಳ ನಿಂದನೆಯ ಮಾತುಗಳಿಲ್ಲ 
ಬಂದುಗಳ ಜೊತೆ
 ಹರಟುವ ಒಡನಾಟವಿಲ್ಲ 
ಅನಾಥರು ,ತಬ್ಬಲಿಗಳು  ಆಪ್ತರು ನಮಗೆಲ್ಲ
ಪ್ರೀತಿಯ ಒಗ್ಗಟ್ಟಿನಲ್ಲಿ ಬಿರುಕಿರುವುದಿಲ್ಲ

ಬದುಕನು ಕಟ್ಟುವ ಯೋಚನೆ ನಮಗಿಲ್ಲ
ಹಾಯಗಿರಲು ನೆತ್ತಿಯ ಮೇಲಿನ
 ಸೂರಿಗೆ ಕೊರತೆ ಇಲ್ಲ
ಕೆಲಸದಲ್ಲಿ ಮೇಲು ಕೀಳೆಂಬ ಬೇಧ ಬಾವವಿಲ್ಲ
ಸುಖವಾಗಿರಲು  ಹೀಗೆ
 ಬದುಕಿನ ಬಂಡಿ ಸಾಗುತಿದೆಯಲ್ಲ

ಚಂಚಲತೆಗೆ ಕೈ ಜೋಡಿಸಿದವರು ಕೆಟ್ಟ
ಚಟಕ್ಕೆ ಬಲಿಯಾಗುವರು
ಕಳ್ಳತನ,ಕುಡಿತ,ಮೋಜು ,ಜೂಜಾಟಗಳಲ್ಲಿ
ಸ್ಥಿರ ಮನಸಿಗೆ ತಲೆ ಬಾಗಿದವರು
ಸುಖದ ಸೌಧವ ಕಟ್ಟುವವರು
ಹೆಂಡತಿ ಮಕ್ಕಳ ಸಂಸಾರದ ಜೀವನದಲ್ಲಿ..

Saturday, August 11, 2012

ಪ್ರೀತಿಯ ನೆನಪು


ನೀ ನನ್ನ ಜೊತೆಗೆ ಇರಲಿ
ಇರದಿರಲಿ
ನಿನಗಾಗಿ ನನ್ನ ಜೀವ
ಎಂದೆಂದಿಗೂ
  ಮಿಡಿಯುವುದು

ನಿನ್ನ ನೆನಪಿನನಲ್ಲೆಯೇ
 ಬದುಕುವುದು
ಎಂದಾದರು  ಒಂದು ದಿನ
ನಿನ್ನ
 ಮನಸಿನಲ್ಲಿ
 ನನ್ನ ಪ್ರೀತಿಯ ನೆನಪು
 ಬರಬಹುದು

ಅಂದೇ ಮುಕ್ತಿ  ನನ್ನ
ಪ್ರೀತಿಗೆ
 ನೆನಸಿಕೊ ನನ್ನನು
ಕಣ್ಣುಗಳನ್ನು ಮುಚ್ಚಿ
ಮನಸನ್ನು ಬಿಚ್ಚಿ
ಎಲ್ಲಿದ್ದರು ಹೇಗಿದ್ದರೂ
ಬರುವೆನು
ನಿನ್ನೆಡೆಗೆ ಬಾಳಿನ ಎಲ್ಲಾ
ಬಂಧಗಳನು ಮುಚ್ಚಿ  

ಕನ್ನಡಿ



 ಮನಸು ಒಂದು
ಕನ್ನಡಿ
ಬಾವನೆಗಳು ಅದರ
ಪ್ರತಿಬಿಂಬ

ಮನಸು ಒಂದು
ಹಸುಗೂಸು
ಅದರ ಬೆಳವಣಿಗೆ
ನಮ್ಮ ಪರಿಶ್ರಮ

ಈ ಎರಡು ಕೈ  ತಪ್ಪಿದಾಗ 
ಒಡೆದರೆ
 ಜೋಡಿಸಲಾಗದು
ದಾರಿ ತಪ್ಪಿದರೆ
 ತಿದ್ದಲಾಗದು