Monday, August 27, 2012

ಉಡುಗೊರೆ



ಗೆಳೆತನದ ಜೊತೆ
 ಮಂದಸ್ಮಿತ
ಪ್ರೀತಿಯ ಜೊತೆ
ಗೌರವ
ಬಾವನೆಗಳ ಜೊತೆ
 ಸ್ಪಂದನೆ
ನಂಬಿಕೆಯ ಜೊತೆ
ಆತ್ಮವಿಶ್ವಾಸ
ನಿನ್ನ ಮುಗ್ಧ ಮನಸಿನ ಜೊತೆ
ನಾನು
ನನ್ನ ಸ್ನೇಹಕಿಂತ
ಮಿಗಿಲಾದ
ಉಡುಗೊರೆ ಬೇಕೇನು ?

Saturday, August 25, 2012

ನನ್ನ ಆತ್ಮದಲ್ಲಿ


ನಾ
ಇಲ್ಲದಿದ್ದರೂ ನೀನೆರುವೆ
ನೀನಿಲ್ಲದಿದ್ದರೆ ನಾ ಎಲ್ಲಿರುವೆ?

ನಿನ್ನ ಮೇಲಿರುವ ಪ್ರೀತಿ
ನನ್ನ ಹೃದಯದ ಗೂಡಿನಲ್ಲಿ
ಅದು ನೀ ತಿಳಿದರೂ ನೀನಿಟ್ಟೆ
ನಿನ್ನ ಕಾಲಡಿಯಲ್ಲಿ

ನಿನ್ನ ಹೆಸರನ್ನು ನನ್ನ ಉಸಿರಲ್ಲಿ
ಸದಾ ಹಸುರಾಗಿಸಿದೆ

ನನ್ನುಸಿರು ಹೋಗಿ ಮಣ್ಣಲ್ಲಿ
ಸಣ್ಣ ಕಣಗಲಾದರು
ಅಚ್ಹಳಿಯದೆ ನಿನ್ನೆಸರಿದೆ
ನನ್ನ ಆತ್ಮದಲ್ಲಿ

ಅರ್ಧಾಂಗಿ



ಕನಸಿನಲಿ ಕಂಡು
 ಮನಗಿಡಿಸಿದವಳು
ನನಸಾಗಿ ಬರುವಳೇ..?

ಕಣ್ಣುಗಳು ಕಾತುರದಿಂದ
ಕಾಯುತಿವೆ
ನಮ್ರತೆಯ ನಿರಾಭರಣ 
ಬಾಲೆಯನು

ಹುಡುಕುತಿಹ ಜೀವಕೆ
 ನನ್ನ ಮುಗ್ದತೆಯ
ಮನಸೇ  ಕಾರಣ

ಸಿಕ್ಕ ಮರು ಕ್ಷಣವೇ ನಮ್ಮ
 ನಂದ ಗೋಕುಲಕೆ
ಸಂತೋಷದ ಹಸಿರು ತೋರಣ

ನನ್ನ ಮನಸಿಗೆ 
ಮುಡುಪಾಗಿ
ಬಾವನೆಗಳಿಗೆ ಆಕರ್ಷಿಸುವ
ಗೆಳತಿಯಾಗಿ

ಈ ಹೃದಯದ ಬಡಿತಕ್ಕೆ
ಸ್ಪಂದಿಸುವವರು
ಯಾರು ಬರುವರೋ
 ನನ್ನ "ಅರ್ಧಾಂಗಿ"ಯಾಗಿ..?

ಹುಡುಗಾಟ



ಯೌವನದ ಅಲೆಯಲ್ಲಿ
ಮೋಜಿನಾಟ

ಬಾವನೆಗಳ ಮಿಲನಕೆ
ಹುಡುಕಾಟ

ಎಳೆಯ ಹೃದಯಗಳ
ಜೊತೆ ಚೆಲ್ಲಾಟ

ಮನಸಿನ ತುಮುಲಗಳ
 ಜೊತೆ
 ನಿರಂತರ  ಹೋರಾಟ

ಇದುವೇ 
ಪ್ರೀತಿ ಎಂಬ
ಮಾಯೆಯ ಹುಡುಗಾಟ

Thursday, August 23, 2012

ಮೊಳಕೆ


ಭಯದ ನೆರಳಿನಲಿ
ಪ್ರೀತಿಯ ಮೊಳಕೆ
ಮಧುರ ಮಾತುಗಳೇ ಮಂಜಿನ
 ಹನಿ ಚಿಗುರಿಗೆ

ಪ್ರತಿಯೊಂದು ಎಲೆಗಳೇ
ಸುಂದರ ಸ್ವಪ್ನಗಳು
ಸಹನೆ ಸಂಯಮವೇ
ಗಿಡದ ಬೆಳವಣಿಗೆ

ಆತ್ಮ ವಿಶ್ವಾಸ ,ನಂಬಿಕೆಯ 
ಪ್ರತಿಫಲವೇ ಹೂವು
ಸಂದೇಹ,ಅನುಮಾನಗಳೇ
ಹಾಳು ಮಾಡುವ
ಕ್ರಿಮಿ ಕೀಟಗಳು 

Wednesday, August 22, 2012

ಬೇಡಿಕೆ


ನಿನ್ನ ಮನಸಿನಲಿ ಪ್ರೀತಿ
ಮುಕ್ತವಾಗಿದ್ದರೆ
ನನ್ನ ಬಾವನೆಗಳನ್ನು
 ಹಂಚಿಕೊಳ್ಳಬಹುದೇ

ಪುಟ್ಟ ಹೃದಯದಲ್ಲಿ ಸ್ವಲ್ಪ
ಸ್ಥಳವಿದ್ದರೆ
ಪ್ರೀತಿಯ ಸೌಧವ ಕಟ್ಟಬಹುದೇ

ಅನುರಾಗದ ಲೋಕದಲ್ಲಿ
ಪುಷ್ಪದಂತಿರುವೆ
ದುಂಬಿಯಾಗಿ ಮಕರಂಧ
 ಹೀರಬಹುದೇ

ಏಕೋ ನಿನ್ನ ನೆನಪಲ್ಲಿ 
ಮನ ಮಿಡಿಯುತಿದೆ
ಪ್ರೀತಿಯ ಬೇಡಿಕೆ ಮಂಡನೆ
ಮಾಡಬಹುದೇ

ಮನಸೋ ಇಚ್ಚೆ ಹಾಡುವ
ನಿನ್ನ ಹಾಡಿಗೆ
ಪಲ್ಲವಿ ನಾನಾಗ ಬಹುದೇ ...?

Monday, August 20, 2012

ಹಾಫ್ ಟೀ,ಹಾಫ್ ಪ್ಲೇಟ್ ಉಪ್ಪಿಟ್



ಅಪ್ಪ ನೋಡಿದ್ ಅಮ್ಮ ಗೆ ಇಡ್ಸೋಲ್ಲ
ಅಮ್ಮ ಹೇಳಿದ್ ಅಪ್ಪ ಒಪ್ಪೋಲ್ಲ
ಇವರಿಬ್ಬರು ನೋಡಿದ್ ನಮಗೆ ಸೇರೋಲ್ಲ

ಪ್ರೀತಿ ಮಾಡಿದವಳು
ಕೈ ಕೊಡ್ತಾಳೆ
ಕೈ ಹಿಡಿದೊಳು ಬೇರೆ ಮನೆ
ಮಾಡು ಅಂತಾಳೆ

ಅತ್ತೆಗೆ ನಾನು ನನ್ ಮಗ
 ಎಂಬ ಆಹಂಕಾರ
ಸೊಸೆಗೆ  ನನ್ ಗಂಡ
ಎಂಬ ದುರಹಂಕಾರ

ಇವರಿಬ್ಬರ ಜಗಳ ನೋಡಿ
ಮಾವ ಮಠ ಬಿಟ್ ಮನೆ ಸೇರೋಲ್ಲ
ಮಗ ಬಾರ್ ಬಿಟ್ ಎದ್ದೆಳಲ್ಲ

ಹುಡುಗಿ ನೋಡೋಕ್ ಹೋಗಿ
ಇರೊ ಅರ್ಧ ಗಂಟೇಲಿ
ಹಾಫ್ ಟೀ,ಹಾಫ್ ಪ್ಲೇಟ್ ಉಪ್ಪಿಟ್
 ತಿನ್ನೋದ್ರೊಳಗೆ
ಅರ್ಧ ಜೀವನ ಜೊತೆಗೆ ಬಾಳೋಲ್ನ
ಹೇಗಪ್ಪ ದೇವ್ರೇ
ಅರ್ಥ ಮಾಡ್ಕೊಳೋದು ?

Friday, August 17, 2012

ಅನಾಥರು

 
 
 
ಬಿದ್ದೆವು  ನಾವು ಬೀದಿ ಬೀದಿಗಳಲ್ಲಿ
ಯಾರೋ ಮಾಡಿದ ತಪ್ಪಿಗಾಗಿ
ಬೆಳೆದೆವು ನಾವು ಜೊತೆ ಜೊತೆಯಾಗಿ
 ಒಡಹುಟ್ಟಿದವರಂತೆ
ನಿರಾಶ್ರಿತರ ಕೊಳಚೆ ಪ್ರದೇಶಗಳಲ್ಲಿ .

ಬಿಕ್ಷೆ ಬೇಡಿದೆವು ಮನೆ,ಮಾರ್ಕೆಟ್ ,ಬಸ್ಸು
ರೈಲು ನಿಲ್ದಾಣಗಳಲ್ಲಿ
ಬಿಡಿಗಾಸಿನಿಂದ ತುತ್ತು ಅನ್ನಕ್ಕಾಗಿ 
ಖುಷಿ ಇಂದ ತಿರುಗಾಡಿದೆವು ಮದುವೆ
ಮೆರವಣಿಗೆ,ಸಮಾರಂಭಗಳಲ್ಲಿ
ಎಂಜಲೆಲೆಯ ಮೃಷ್ಟನ ಭೋಜನಕ್ಕಾಗಿ 

ಅಪ್ಪ ಅಮ್ಮನ ಪ್ರೀತಿ ತೋರುವರು ಒಂದು  ದಿನದಲ್ಲಿ
ಶ್ರೀಮಂತರು ಸಮಾಜದಲ್ಲಿ
ತಮ್ಮ ಗೌರವ ಘನತೆಗಾಗಿ
ಹುಟ್ಟಿದ ದಿನವೇ ಗೊತ್ತಿರದ ನಾವು
ಸಂಭ್ರಮಿಸಿದೆವು
ಸಿಹಿ ತಿನ್ನುತ ಬೇರೆಯವರ
ಜನ್ಮ ದಿನಕ್ಕಾಗಿ

ಹಿಂದಿಲ್ಲ , ಮುಂದಿಲ್ಲ ಯಾರ ಹಂಗಿಲ್ಲದ
ನಮಗೆ ನಾವೇ ಸ್ವತಂತ್ರರು
ನೊಂದ ಜೀವವು ಧಣಿದು ಮರುಗಿದಾಗ
ಯಾರಿಲ್ಲದ ನಾವು
 ಬದುಕಿನಲ್ಲಿ ಅತಂತ್ರರು

ಸಂಬಂದಗಳ ನಿಂದನೆಯ ಮಾತುಗಳಿಲ್ಲ 
ಬಂದುಗಳ ಜೊತೆ
 ಹರಟುವ ಒಡನಾಟವಿಲ್ಲ 
ಅನಾಥರು ,ತಬ್ಬಲಿಗಳು  ಆಪ್ತರು ನಮಗೆಲ್ಲ
ಪ್ರೀತಿಯ ಒಗ್ಗಟ್ಟಿನಲ್ಲಿ ಬಿರುಕಿರುವುದಿಲ್ಲ

ಬದುಕನು ಕಟ್ಟುವ ಯೋಚನೆ ನಮಗಿಲ್ಲ
ಹಾಯಗಿರಲು ನೆತ್ತಿಯ ಮೇಲಿನ
 ಸೂರಿಗೆ ಕೊರತೆ ಇಲ್ಲ
ಕೆಲಸದಲ್ಲಿ ಮೇಲು ಕೀಳೆಂಬ ಬೇಧ ಬಾವವಿಲ್ಲ
ಸುಖವಾಗಿರಲು  ಹೀಗೆ
 ಬದುಕಿನ ಬಂಡಿ ಸಾಗುತಿದೆಯಲ್ಲ

ಚಂಚಲತೆಗೆ ಕೈ ಜೋಡಿಸಿದವರು ಕೆಟ್ಟ
ಚಟಕ್ಕೆ ಬಲಿಯಾಗುವರು
ಕಳ್ಳತನ,ಕುಡಿತ,ಮೋಜು ,ಜೂಜಾಟಗಳಲ್ಲಿ
ಸ್ಥಿರ ಮನಸಿಗೆ ತಲೆ ಬಾಗಿದವರು
ಸುಖದ ಸೌಧವ ಕಟ್ಟುವವರು
ಹೆಂಡತಿ ಮಕ್ಕಳ ಸಂಸಾರದ ಜೀವನದಲ್ಲಿ..

Saturday, August 11, 2012

ಪ್ರೀತಿಯ ನೆನಪು


ನೀ ನನ್ನ ಜೊತೆಗೆ ಇರಲಿ
ಇರದಿರಲಿ
ನಿನಗಾಗಿ ನನ್ನ ಜೀವ
ಎಂದೆಂದಿಗೂ
  ಮಿಡಿಯುವುದು

ನಿನ್ನ ನೆನಪಿನನಲ್ಲೆಯೇ
 ಬದುಕುವುದು
ಎಂದಾದರು  ಒಂದು ದಿನ
ನಿನ್ನ
 ಮನಸಿನಲ್ಲಿ
 ನನ್ನ ಪ್ರೀತಿಯ ನೆನಪು
 ಬರಬಹುದು

ಅಂದೇ ಮುಕ್ತಿ  ನನ್ನ
ಪ್ರೀತಿಗೆ
 ನೆನಸಿಕೊ ನನ್ನನು
ಕಣ್ಣುಗಳನ್ನು ಮುಚ್ಚಿ
ಮನಸನ್ನು ಬಿಚ್ಚಿ
ಎಲ್ಲಿದ್ದರು ಹೇಗಿದ್ದರೂ
ಬರುವೆನು
ನಿನ್ನೆಡೆಗೆ ಬಾಳಿನ ಎಲ್ಲಾ
ಬಂಧಗಳನು ಮುಚ್ಚಿ  

ಕನ್ನಡಿ



 ಮನಸು ಒಂದು
ಕನ್ನಡಿ
ಬಾವನೆಗಳು ಅದರ
ಪ್ರತಿಬಿಂಬ

ಮನಸು ಒಂದು
ಹಸುಗೂಸು
ಅದರ ಬೆಳವಣಿಗೆ
ನಮ್ಮ ಪರಿಶ್ರಮ

ಈ ಎರಡು ಕೈ  ತಪ್ಪಿದಾಗ 
ಒಡೆದರೆ
 ಜೋಡಿಸಲಾಗದು
ದಾರಿ ತಪ್ಪಿದರೆ
 ತಿದ್ದಲಾಗದು

Friday, July 20, 2012

ಮುಳ್ಳು


ಎಲ್ಲೋ ಸಿಕ್ಕ ಪ್ರೀತಿಯ
 ಬೀಜವನ್ನು
"ಹೂ" ವಾಗುತ್ತದೆ 
ಎಂದು ಬಿತ್ತಿದೆ

ಪ್ರೇಮ,ಅನುರಾಗದ
ಧಾರೆಯೆರದು
 ಪೋಷಿಸಿ ಬೆಳೆಸಿದೆ

ಮುಂದೊಂದು ದಿನ
 ನೀ ನನ್ನಾಸೆಯ
 ಹೂ ಆಗುತ್ತಿಯೆಂದು

ಆದರೆ ನೀ
 ವಿಷದ "ಮುಳ್ಳು" 
ಆಗುತ್ತಿಯ  
ಎಂದು ಕೊಂಡಿರಲಿಲ್ಲ .....

Tuesday, July 17, 2012

ನಿರುದ್ಯೋಗದ ಬೀತಿ


ಮನ್ನಿಸಲು ನಾ ಯಾರು ಗೆಳತಿ
ನೀ ಮಾಡಿದ ತಪ್ಪಾದರೂ ಏನು ?
ತಪ್ಪು ನಿನ್ನದಲ್ಲ ,ನನ್ನದು ಅಲ್ಲ
ಸದ್ಯದ ಪರಿಸ್ತಿತಿ ಇರುವುದೇ ಈಗಲ್ಲ

ಸಂತಸ ಪಡಲು ಇದು  ಬಾಲ್ಯವಲ್ಲ
ಮರುಗಲು ಮುಪ್ಪಿನ್ನು ಬಂದಿಲ್ಲ

ಜೀವನವ ನಿರ್ಧರಿಸುವ ಘಟ್ಟವಿದು
ದಾರಿ  ತಪ್ಪಿದರೆ ಮುಂದೆಂದು
 ಏನೂ ಕಾಣದು
ಜಾರಿ ಬಿದ್ದರೆ ಮೇಲೆತ್ತಲು
 ಯಾರು ಬರರು

ಗತಿಸಿದ ವಯಸ್ಸು ಇಪ್ಪತ್ಹೆಂಟು ೨೮
ಏರುವ ಮೆಟ್ಟಿಲುಗಳು ನೂರೆಂಟು ೧೦೮

ಮಾಡುವ ಕೆಲಸದಲ್ಲಿ ತೃಪ್ತಿ ಇಲ್ಲ
ಆದರೆ ಏನೂ ಮಾಡುವುದು
ದುಡ್ಡೀಗಾಗೆ ಪ್ರಾಮುಕ್ಯತೆ ಎಲ್ಲಾ

ಉದ್ಯೋಗ ದಲ್ಲಿ  ಭದ್ರತೆ ಕಾಣುತ್ತಿಲ್ಲ 
ಒಂದೆಡೆ ನೆಲೆ ನಿಲ್ಲಲು ಪರದಾಡ
 ಬೇಕಾಗಿದೆಯಲ್ಲಾ

ನನ್ನ ನಿರೀಕ್ಷೆ ಗಳು ತಲುಪಿಲ್ಲ
ಅಪ್ಪನ ಮನ ಒಪ್ಪುತ್ತಿಲ್ಲ
ಅಮ್ಮನ ಕೊರಗು ನಿಂತಿಲ್ಲ

ಏನೂ ಮಾಡುವುದು ಎಂದು
ತಿಳಿಯುತ್ತಿಲ್ಲ
ಎಲ್ಲೆಡೆ ನಿರುದ್ಯೋಗದ ಬೀತಿ
ಕಾಡುತಿದೆಯಲ್ಲ..

Friday, July 13, 2012

ನೆಮ್ಮದಿಯ ಜೀವನ

 
ಸುಂದರ ಬದುಕಿನ
ಆಲೋಚನೆಯಲ್ಲಿ
ನಾಳಿನ ದಿನಗಳ
ಎಣಿಕೆಯಲ್ಲಿ

ಅಂತರಾಳದ
 ಬಾವನೆಗಳೊಂದಿಗೆ
ವಾತ್ಸಲ್ಲ್ಯದ
ಮದುರತೆಯಿರಲಿ

ಹಿರಿಯ ಕಿರಿಯರೊಂದಿಗೆ
ಗೌರವ,ನಂಬಿಕೆ
ಸಂಬಂದಗಳಲ್ಲಿ
ಪ್ರೀತಿ,ವಿಶ್ವಾಸ
ಬೆಳೆಯುತಿರಲಿ
 
ಸ್ವಾರ್ಥ,ಬಿಗುಮಾನದ
ವರ್ತನೆ ಬದಿಗಿರಲಿ
ನಾನು ನನ್ನದು ಎಂಬ
 ಅಹಂಕಾರವಿರದಿರಲಿ

ಬಾಳ ಪಯಣದಲಿ
 ಸುಖ ದುಃಖಗಳೊಂದಿಗೆ
ಸಮತೋಲನದಿ
 ನೆಮ್ಮದಿಯ ಜೀವನ
ನಮ್ಮದಾಗಿರಲಿ

Monday, July 9, 2012

ಅಭಿಪ್ರಾಯ

 
ನಾ ಬರೆದ ಕವನಗಳು
ಪ್ರೀತಿಯ ವಿಷಯದಲ್ಲಿ
ಕೆಲವು ಸಾಲುಗಳು
ನನ್ನ ಬಾವನೆಗಳಲ್ಲ

ನನ್ನ ಕಾಲೇಜು ದಿನಗಳಲ್ಲಿ
ಗೆಳೆಯ/ತಿ ಯರ ಜೀವನದಲ್ಲಿ 
 ನಡೆದ ಪ್ರೇಮ ಪ್ರಸಂಗದ
 ಸಿಹಿ ಕಹಿ ಮಜಲುಗಳೆಲ್ಲ

ನಮ್ಮ ಸುತ್ತ ಮುತ್ತಲಿನ 
ಪರಿಸರದಿ
 ನಡೆಯುವ ರೀತಿ ನೀತಿ
 ಪಜೀತಿಯ ಜಂಜಾಟಗಳೆಲ್ಲ

ಈ ಸಮಾಜದಲ್ಲಿ 
ನಡೆಯುತ್ತಿರುವ
ವಾಸ್ತವಿಕ
 ಚಿತ್ರಣದ ಅಂಶಗಳೆಲ್ಲ 
 
ಈ ಎಲ್ಲಾ  ಘಟನೆಗಳ ಸುತ್ತ
 ನನ್ನಲ್ಲಿ ಮೂಡಿದ
ವೈಯಕ್ತಿಕ ಅಭಿಪ್ರಾಯಗಳೆಲ್ಲ .

Monday, July 2, 2012

ಸಾರ್ಥಕಬದುಕು


ಬಾವನೆಗಳು ಬದಲಾಗುತ್ತಿದೆ
ಮನಸಿನ
ಬೇಡಿಕೆಗಳು,ಮುಂದಿಟ್ಟಂತೆ

ಚಂಚಲ ಮನಸು ಕಾಲಕ್ಕೆ 
ಸರಿಯಾಗಿ ಸ್ತಿರವಾಗುತ್ತಿದೆ
 ನಿಂತ ನೀರಿನಂತೆ

ಜೀವನದ ಬೆಳವಣಿಗೆಗೆ ತಕ್ಕಂತೆ
ಹೃದಯ
ಎಚ್ಚರಗೊಳಿಸುತ್ತಿದೆ
ಶಬ್ದ ತರಂಗಗಳಂತೆ

ಈ ಸಂಘರ್ಷ ಸಮಾಜದಲ್ಲಿ
ಪರಸ್ಪರ ಸಹಬಾಳ್ವೆ ಬೇಕು
ಜೀನಿನ ಗೂಡಿನಂತೆ

ಬಾಳಿಗೊಂದು ನಂಬಿಕೆ ಅರ್ಥ
ಬರಲು ಇರಬೇಕು
ಜೀವನೋತ್ಸಹ ,ಪರಿಶ್ರಮ
ಸಾಧನೆ ಛಲದಂತೆ

ಬದುಕು ಸಾರ್ಥಕವಾಗಲು
 ದುಡಿಮೆಯ ಜೊತೆಗೆ ಬೇಕು
ಹೆತ್ತವರ ಅರ್ಶಿವಾದ,ಕೃಪೆಯೊಂದು
ಮತ್ತು ಅರ್ಥ ಮಾಡಿಕೊಳ್ಳುವ
 ಸಂಗಾತಿಯ ಮನಸೊಂದು .
  

ಹೂವು

 
ಹೂವಿನ ತೋಟದಲಿ ನಿಂತಿರುವೆ ನಾನು
ಇದರಲ್ಲಿ ಯಾವ ಹೂವು
ನನ್ನದೆಂದು ತಿಳಿಯದಿರೆನು

ಯಾವ ಹೂವು ಯಾರ ಮುಡಿಗಾದರೇನು
ಇದರಲ್ಲಿ ನನಗಾಗಿಯೇ
ಒಂದು ಹೂವು ಕಾಯುತಿರಬಹುದೇನೋ
ದೇವರ ಪೂಜೆಗೆ ಭಕ್ತಿಯ
  ಹಾರವಾದರೇನು
ಮಸಣದಲ್ಲಿ ಗೋರಿಯ ಮೇಲಿಡುವ ಬಿಡಿ
ಹೂವಾದರೇನು 

ಮಲ್ಲಿಗೆಯ ಸುವಾಸನೆಯಾದರೇನು
ಗುಲಾಬಿಯ ಅಂದವಾದರೇನು
ಸೇವಂತಿಗೆಯ ರಂಗು ರಂಗಾದರೇನು
 ಕೇದಿಗೆಯ ಕಂಪಾದರೇನು 
 
ಒಟ್ಟಿನಲ್ಲಿ
ನನ್ನ ಹೃದಯದ ಒಡತಿಯ
 ಅಂದದ ಮುಡಿಗೆ
ಚೆಂದವಾಗಿ ನೀ ಇರಬೇಕು ಅಸ್ಟೇ...! 

Monday, June 25, 2012

ಮಾಂಗಲ್ಯ ಬಂಧನ


ಕನಸಿನಲ್ಲಿ ಬಯಸಿದ ಬಾಲೆ
ಬರುವಳೇ
 ಮದುವೆಯ ಮಂಟಪಕೆ
ಬಾಹು ಬಳಸಿ ಬರಸೆಳವೆ
ಮಾಂಗಲ್ಯ ಬಂಧನಕೆ
ನಿನ್ನ ಬಾವನೆಗಳಿಗೆ ಬೆಲೆಕೊಡುತ
ಸ್ಪಂದಿಸುವೆ ಭ್ರಮೆ ಏತಕೆ ?
ಬಾಳಯಾನದಲಿ ನಾ ಬದುಕಿರುವರೆಗೂ
ಪ್ರೀತಿಸುವೆ ಭಯವೇತಕೆ...?

Friday, June 22, 2012

ಪ್ರೇಮ ಬಿಕ್ಷುಕ


  ನಿನ್ನ ಚಿತ್ತವನು ಅಪಹರಿಸಲು ಹೊಂಚು
ಹಾಕುತ್ತಿರುವ
ಸಂಚುಗಾರ ನಾನು

ನಾನಗೆ ಕದ್ದರೆ ನಿನ್ನ ಮನಸಿನಲಿ ಘೋರ
ಅಪರಾದಿ ನಾನು

ನೀನಾಗೆ ಕೊಟ್ಟರೆ ನಿನ್ನ ಹೃದಯದಲಿ
ಪ್ರೇಮ ಖೈಧಿ ನಾನು

ಏನು ಮಾಡುವೆ ಮುಗ್ಧ ಬಾಲೆ
ನಾ..... ಕದಿಯಲಾ....?
       ಅಥವಾ 
ನೀ ಕೊಡುವೆಯ.....?

 ಭಯಪಡಬೇಡ  ಬೆಡಗಿ
ನಾ ವಂಚಕ,ನಂಬಿಕೆಧ್ರೋಹಿಯಲ್ಲ
ನಿನ್ನ ಪ್ರೇಮ ಬಿಕ್ಷುಕ..

Friday, June 15, 2012

ರಾಜಕೀಯ ರಣ ಹದ್ದುಗಳು

 
ಹಿಂದೂ, ಹಿಂದೂ ಧರ್ಮ, ಅಯೋದ್ಯೇ ,ಶ್ರೀ ರಾಮ  ಎಂಬ
 ದ್ಯೇಯದೊಂದಿಗೆ ಮಠ ಮಾನ್ಯಗಳಿಗೆ ದೇಣಿಗೆ ನೀಡುತ್ತ 
 ಕುದುರೆ ವ್ಯಾಪಾರ,  ಭ್ರಸ್ಟಾ ಚಾರದಲ್ಲಿ ಬಾಗಿಯಾಗಿರುವ
 ಬಾರತೀಯ ಜನತಾ ಪಾರ್ಟಿ..

ಮುಸ್ಲಿಂ, ಕ್ರಿಶ್ಚಿಯನ್,ಅಲ್ಪ ಸಂಖ್ಯಾತರು ನಮ್ಮವರು ಎಂದು
ಹುಚ್ಚು ಕಲ್ಪನೆಯಲ್ಲಿ  ಕೋಟಿ  ಕೋಟಿ ಲೂಟಿ ಮಾಡಿ
ಬೆಲೆ ಏರಿಕೆ,ಅಸಮರ್ಥ ನಾಯಕತ್ವ , ಹಗರಣಗಳಲ್ಲಿ
 ಕೊಳೆಯುತ್ತಿರುವ ಕಾಂಗ್ರೆಸ್ ..
 

ಬಡವರು,ದಲಿತರು ನಮ್ಮ ಸೋದರ ಸೋದರಿಯರು ಎಂದು
ಬಡಿದಾಡುತ ನೋಟಿನಲ್ಲೆ ಗುಂಡಾಗಿರಿಯ ಧರ್ಪದಲ್ಲಿ
  ಮೆರೆದಾಡುವ ಬಹು ಜನ ಸಮಾಜ ಪಾರ್ಟಿ ...

ಸರ್ವರಲ್ಲೂ ಸಮಾನತೆ,ಸಹಬಾಳ್ವೆ ,ನಮಜೋದ್ಧಾರಕರು ಎಂದು
ಎಲ್ಲರಲ್ಲೂ ಸಂದೇಹ ಬಾವನೆ ಮೂಡಿಸುವ ಸಮಾಜವಾದಿ ಪಕ್ಷ ..

ಕಾರ್ಮಿಕರು,ಕೂಲಿ ಕೆಲಸದವರು,ನಿರುದ್ಯೋಗಿಗಳನ್ನು ಕಪಿಮುಸ್ಟಿಯಲ್ಲಿ
ಬಂಧಿಸಿ ,ನಾವು ನಮ್ಮಿಂದಲೇ ಹೋರಾಟ ಎನ್ನುವ ಕಮ್ಯುನಿಸ್ಟರು ..

ಅತಂತ್ರವಾದಾಗ ಕುತಂತ್ರದ ನಾಟಕದಲ್ಲಿ
ಚದುರಂಗದ ಆಟವಾಡುವ ಎಡ / ತೃತೀಯ ರಂಗ..

ಗ್ರಾಮ ವಾಸ್ತವ್ಯ ಮಾಡಿ,ಜನರಲ್ಲಿ ಸುಳ್ಳು ಭರವಸೆ ಮೂಡಿಸಿದ
 ಅಪ್ಪ ಮಕ್ಕಳು ಅವರಿವರ ಮೇಲೆ ಆಪಾದನೆ ಹೊರಿಸುತ
ಮಾತು ತಪ್ಪಿದಜನ ವಿರೋಧಿ ಜನತಾ ದಳ ....

ಇವು ನಮ್ಮ ದೇಶವನ್ನಾಳುವ ರಾಜಕೀಯ ಪಕ್ಷಗಳು
ಹೆಣ್ಣು,ಮಣ್ಣು, ಹೊನ್ನುಗಳ ಹಿಂದೆ ಬಿದ್ದಿರುವ ನಾಯಕರು
ಭಾರತೀಯ ಪ್ರಜೆಗಳನ್ನು ಹರಿದು ಹಂಚಿ ತಿನ್ನುವ
ರಾಜಕೀಯ ರಣ ಹದ್ದುಗಳು ..

Monday, June 11, 2012

ಲವ್ ಜಿಹಾದ್

ಪ್ರೀತಿಯ ಮುಖವಾಡದಿ   ಮತಾಂತರ
ಅದರ  ಒಳಗಿರುವುದು  ಚಿತ್ರ ಹಿಂಸೆಗಳ ಆಗರ

ಮುಕ್ತ ಮನಸಿನ ಭಕ್ತಿಯಿಂದ ಭಗವಥ್ಗೀತೆ ಓದಿ
 ಗುಡಿಗಳನ್ನು ಸುತ್ತುವ ನಿನಗೆ
ಮುಕ್ತಿ ಗೆ ಮಾರ್ಗವಿಲ್ಲದ ಮಸೀದಿ, ಮದರಸುಗಳಲ್ಲಿ
ಖುರಾನ್ ನನ್ನು  ಕಲಿಯುವ ಹಠವೇತಕೆ..?

ಹಣೆಗೆ ಸಿಂಧೂರ ಕೆನ್ನೆಗೆ ಹರಿಶಿನದ
ಕಾಂತೀಯ ಲಕ್ಷಣವಿರಲು
ಕತ್ತಲೆಯಲಿ ಕಣ್ಣು ಬೆಳಕನುಡುಕುವ ಹಾಗೆ
ಬುರುಕ ಹಾಕುವ ಅವಲಕ್ಷಣವೇಕೆ ..? 

ಇಚ್ಚೆಯ ಗಂಡನೊಡನೆ ಸ್ವಚ್ಚಂದ ಬದುಕಿನಲಿ
ಸುಂದರ ಸ್ವಪ್ನಗಳನು ಕಾಣುವ ಬದಲು
ಕುರುಡು ಪ್ರೀತಿಯ ಕಾಮ ತೃಷೆಗೆ ವಶವಾಗಿ
ಬಹು ಪತ್ನಿಯರ ಜೊತೆ ಸವತಿಯಗುವ ಜೀವನ ಬೇಕೇ...?

ಹಸಿದ ಕಂದಮ್ಮಗಳಿಗೆ  ಹಾಲು ಕೊಟ್ಟು
ಅನ್ನದಾತನಿಗೆ ಹೆಗಲು ಕೊಟ್ಟು ದುಡಿಯುವ
ಗೋಮಾತೆಯ ಪಾಲನೆ ಪೋಷಣೆಗಿಂತ

ಘ್ರೋರ ವ್ಯಾಗ್ರವಾಗಿ ಹಸಿದ ಹೆಬ್ಬುಲಿಯಂತೆ
ಕಿಂಚಿತ್ ಕರುಣೆ ಇಲ್ಲದೆ ಮೂಕ ಪ್ರಾಣಿಯ
ಭಕ್ಷಿಸುವವರ  ಸಂಗ ಬೇಕೇ ...?

ಭಯೋತ್ಪಾದನೆಯ ಬೆನ್ನ ಹತ್ತಿ  ದೇಶದ್ರೋಹಿಯಾದ
ಇಸ್ಲಾಂ ನಲ್ಲಿ ಜೀವಂತ ಶವವಾಗುವ ಬದಲು 
ಭವ್ಯ ಬಾರತದಲ್ಲಿ  ಹಿಂದೂ ಪರಂಪರೆ ಸಂಸ್ಕೃತಿಯ ಬೆಳಗುವ
ಭಾರತೀಯ ನಾರಿಯಾಗು, ಸಮಾಜದ ಪ್ರತೀಕವಾಗು .

Thursday, June 7, 2012

ಖಾವಿ ಕಾಮಿ

ಧರ್ಮ ಸಂಸ್ಥಾಪನೆಯ ಹೆಸರಿನಲ್ಲಿ ಧಾರ್ಮಿಕ ತಳಹದಿ
ಭಕ್ತಿ ಮಾರ್ಗ,ತತ್ವ ಸಿದ್ಧಾಂತದ ಪ್ರಚಾರದ ಮೇಲೆ ಹಣದ ಬುನಾದಿ

ಅಚಾರ, ವಿಚಾರ, ಸಂಪ್ರದಾಯಗಳು ಪರದೆಯ ಮುಂದೆ
ಕಾಮ ಅಶ್ಲೀಲ ಭಂಗಿಗಳು ಸಖಿಯರ ಸೆರಗಿನ ಹಿಂದೆ

ಮಂತ್ರ ಪ್ರವಚನಗಳು  ಅಧ್ಯಾತ್ಮ ಧ್ಯಾನ ಪೀಠದ ಮೇಲೆ
ಅನೈ ತಿಕ ಚಟುವಟಿಕೆಗಳು ,ರಾಸಲೀಲೆಗಳು ,ಪಲ್ಲಂಗದ ಮೇಲೆ

ಜನರ ಧಾರ್ಮಿಕ ಬಾವನೆಗಳಿಗೆ ಧ್ರೋಹ ಬಗೆದ ಕಾಮಿ ಸ್ವಾಮಿಗಳು
ಸಾದು ಸಂತರ ಘನತೆಗೆ ಗೌರವಕ್ಕೆ ಧಕ್ಕೆ ಚ್ಯುತಿ ತಂದವರು

      ಖಾವಿ ಧರಿಸುವವರು ಕಾಮಕ್ಕೆ ದಾಸರಾದರೆ ....
ಮಠ ಮಂದಿರಗಳಲ್ಲಿ ದೈವ ಪುರುಷರಿಗೆ ಮಹತ್ವವೆಲ್ಲಿದೆ ?

Monday, June 4, 2012

ಮಳೆ ಹನಿ


              
   ಮಳೆ  ಸುರಿಸುವ  ಮೂಡ್  ನಲ್ಲಿದೆ ಮೋಡ
   ಹಾಗಾಂತ ತರೆಗೆಲೆಗಳ  ಉದುರಿಸಿ
 ತಂಗಾಳಿ  ಬೀಸೀ ಕರೆಯುತ್ತಿ
  ಮೈದಡವಿ  ನಿಂತಿರುವೆ ತುಂತುರು
 ಮಳೆ ಹನಿ ನಿರೀಕ್ಷೆಯಲಿ .

ಜೋಡಿ ಹಕ್ಕಿ


ಜೋಡಿ ಹಕ್ಕಿ

                                                                                                                                                                    ನಯನಗಳು ನಾಜೂಕಾಗಿ ನಿರೀಕ್ಷಿಸುತ್ತಿವೆ
ನನ್ನೆದೆಯ ಗೂಡಿನ ಪಕ್ಷಿಗಾಗಿ ,
ಮನಸೆಂಬ ಬಾಳ ಅಂಗಳದಲ್ಲಿ ಸ್ವಚ್ಚಂದವಾಗಿ
ಹಾರಾಡುವ ಜೋಡಿ ಹಕ್ಕಿಗಾಗಿ .

Monday, March 12, 2012

ಮಾಮನ ನೆನಪು



ಮರೆಯಾಗಿರುವಿರಿ ನೀವು
ಮನುಜರಿಗಿಂದು
ಕದಲದೆ ನೆಲೆಯುರಿರುವಿರಿ
ನಮ್ಮ ಮನದಲ್ಲಿಂದು
ವರುಷಗಳು 3 ಆದರೇನು
 100 ಆದರೇನು 
4  ಆದರೇನು
 ನಾ ಕಾಣದಾದರೇನು..?
ನೀವಿರುವಿರಿ ಸದಾ
 ನಮ್ಮೊಳಗೆಂದೆಂದು.

ರಚಿಸುವ ಕವನಗಳು


ರಚಿಸುವ ಕವನಗಳು ಅವರ ಅವರ
ಅಭಿರುಚಿ ಅಷ್ಟೇ
ಕನಸುಗಳು ನನಸಾದರೆ
ಮನಸುಗಳು ಪರಿ ಪೂರ್ಣ
ಬಾವನೆಗಳು ಅರ್ಥ ಪೂರ್ಣ,
... ಕನಸು ಕನಸಾಗಿಯೇ ಇದ್ದರೆ
ಅದು ನಿಮ್ಮ ಮನಸು ಚಂಚಲ
ಬಾವನೆಗಳು ಅನಿಶ್ಚಲ .

ನಿಯತ್ತು


ನಾಯಿಯಂತಹ ನಿಯತ್ತು ತೋರುತ್ತಾರೆ
ಉದ್ಯೋಗಿಗಳು ಕಂಪನಿಗಾಗಿ.
ಎಲುಬಿಲ್ಲದ ನಾಲಿಗೆಯಂತೆ ಮಾತು ಬದಲಾಯಿಸುತ್ತವೆ
ಕಂಪನಿಗಳು ಉದ್ಯೋಗಿಗಾಗಿ