Tuesday, June 25, 2013

ಕಪ್ಪು


ಮೋಡ ಕಪ್ಪಾದಾಗಲೇ
ಮಳೆಯು  ಭೂಮಿಗೆ  ಚುಂಬಿಸುವುದು

ಕಾಡಿಗೆ ಕಣ್ಣಂಚಲಿ ಕಂಡಾಗಲೇ
ಕಣ್ಣಿನ ಅಂದ ಹೆಚ್ಚುವುದು

ರಾತ್ರಿಯಲಿ ಕತ್ತಲು ಅವರಿಸಿದಾಗಲೇ
ಬೆಳದಿಂಗಳ ಸೊಬಗು ಕಾಣುವುದು

ಕಲ್ಲಿದ್ದಲು ಕಾದು  ಕೆಂಪಾದಾಗಲೇ
ಚಿನ್ನ ಕರಗಿ ಅಭರಣವಾಗಿ ಆಕರ್ಷಿಸುವುದು

ನೋಡಿದವರು  ಕಪ್ಪಗಿದ್ದರೆನಂತೆ
ನೆಡೆ,ನುಡಿ, ನೋಟವೂ  ಕಪ್ಪಿರುತ್ತದೆಯೇ ?

ಮುಖದಲ್ಲಿ ಬಣ್ಣ ಕಮ್ಮಿಯಾದರೆ
ಅವರ ಲಕ್ಷಣ ,ಮನಸು ಮಾಸಿ ಹೋಗಿರುವುದೇ?

 ಬಣ್ಣಕ್ಕೆ  ಮಹತ್ವ ಕೊಡುವುದಾದರೆ
ವ್ಯಕ್ತಿಯ ಬಾವನೆಗಳಿಗೆ ಬೆಲೆನೇ ಇಲ್ಲವೇ ?

No comments:

Post a Comment