Monday, April 22, 2013

ಕೆನೆ ಪದರ


ಭರವಸೆಯ ಬಾವನೆಗಳು ಭಾರವಾಗಿ
ಬಾಡಿದೆ ನಿನ್ನ ಮುಖ
ಕಮರಿಹೋದ ಕನಸುಗಳಿಗೆ ಭಾವುಕವಾಗಿ
ಕಪ್ಪಿಡುತಿವೆ  ಕಣ್ಣುಗಳು

ಅಕಾಲಿಕೆಯ ಅಗಲಿಕೆ ಅಕ್ಕರೆ
ಆತ್ಮ ದಿಂದ
ಇಂಚು ಇಂಚಾಗಿ ಕರಗುತಿದೆ ಮಾಗಿದ
ಮನಸುಗಳು

ವಾಸ್ತವಿಕ ಬದುಕಿನಲಿ ಛಲದಿಂದಿರುವರು
ನೀನಿರುವೆಯೆಂದು 
ಹೆಚ್ಚಾಗಿ ಸಹಕರಿಸಲಿ ಉತ್ಸಾಹದ ಕನಸುಗಳು
ಧೃತಿಗೆಡದಿರಲೆಂದು


ಮಡಿದ ಮನಸಿಗೆ ಮನಶಾಂತಿ ಕೊಡುವುದೇ
ಮಮತೆಯ ನಿನ್ನ ಆಕ್ರಂದನ
ಅವರ ಅಶಾ ಮಾರ್ಗಗಳಿಗೆ ಬೆಳಕಾಗು 
ನೀ ಕತ್ತಲೆಯ ಕಾರ್ಮೋಡ ಕವಿಯಬೇಡ

ನಿಷ್ಟೆ ಇಲ್ಲದ ಅನಿಷ್ಟ ಪದ್ದತಿಯಿಂದ ಎಳೆಯ
ಪ್ರಾಣಕೆ ಸಂಚಕಾರ ತಂದವರು
ಮರೆತು ಬಿಡು ಜೀವನದ ಜೊತೆ ಚೆಲ್ಲಾಟ ಆಡುವವರನ್ನು
ಆ ದೇವರಿದ್ದಾನೆ ಅವರ ವಿಧಿಯಾಟವಾಡಲು

ಬೇಸಿಗೆಯಲಿ ತರಗೆಲೆಗಳು ಉದುರಿದ ಹಾಗೆ
ಕಳಚಿ ಬೀಳಲಿ ನಿನ್ನ ಕಹಿ ನೆನಪುಗಳು
ನವ ವಸಂತಕೆ  ಹೊಸ ಋತುವಿನ  ಹಾಗೆ
ಮೂಡಲಿ ಸಿಹಿಯಾದ ಕಲ್ಪನೆಗಳು 


ಹರಿದು ಬಿಡು ಹಳೆಯ ಮುಸುಕಾದ ತೊಗಟೆಗಳನ್ನು
ಕನವರಿಸು ಸಾಧನೆಯ ಹಾದಿಯನ್ನು
ತೊರೆದು ಬಿಡು ಇಚ್ಚೆ ಇಲ್ಲದವರ ಸಂಬಂಧವನ್ನು
ಧೈರ್ಯದಿಂದಿರು ಗೆಳೆತನ ಜೊತೆಗಿರುವುದೆಂದು

ಅಕ್ಕರೆಯ ಅಪ್ಪ,ಅಮ್ಮ ಅವರಿಗೆ ಸಕ್ಕರೆಯ
ಸವಿಯಾಗು
ಹಾಲಿನಂತ ಶುಬ್ರ ಮನಸುಗಳಿಗೆ ರಕ್ಷಣೆಯ ಕೆನೆ ಪದರವಾಗು

Friday, April 19, 2013

ಏಕಾಂಗಿ

 
 
ಬೇಡವೇ ಬೇಡ ಬಂದುಗಳ
ಸಂಬಂಧಗಳು

ಈ ಬಂಧನವು  ನನಗೆ  ನುಂಗಲಾರದ
ತುತ್ತುಗಳು

ಸದಾ ಮನಸಿಗೆ ನೋವು ಕೊಡುವ
ಆ ಚುಚ್ಚು ಮಾತುಗಳು

ಸಹಿಸಲಾರೆನು ಈ ಸಂಬಧಗಳ
ಸಂಕೋಲೆಗಳನ್ನು

ಅದಕ್ಕೆಂದೇ ನಾ ಬಯಸಿದೆ
 ಏಕಾಂಗಿತನವನ್ನು .

Thursday, March 21, 2013

ಮಿಸ್ ಕಾಲ್




ಕೈ
 ಕೊಟ್ಟು ಹೊಡಿಹೊದಳು 
ಮೊಬೈಲ್ ಜೊತೆ 
girl Friend
ಮಿಸ್ ಕಾಲ್
ಬೆನ್ನತ್ತಿಕೊಂಡು

ಹೊಸ ಮೊಬೈಲ್
ತೆಗೆದುಕೊಂಡು
wait ಮಾಡುತಿರುವೆನು 
ನನಗೂ
ಮಿಸ್ ಕಾಲ್
ಬರುವುದೆಂದು !

Wednesday, March 20, 2013

ನೋಡೋ ಹುಡುಗಿ


ನೋಡೋ ಹುಡುಗಿಯರೆಲ್ಲಾ
ಚಂದನದ
ಬೊಂಬೆಯಾಗಿರಲ್ಲ

ಸುಂದರವಾಗಿರೋರೆಲ್ಲ
 ನಾವ್
ತಿಳ್ಕೊಂಡಿರೋ ತರ  ಇರೋಲ್ಲ

ಸಿಂಪಲ್ಲಾಗಿ ಇರೋರೆಲ್ಲ
ಸೈಲೆಂಟ್ 
ಅಂತ  ಹೇಳೋಕಾಗಲ್ಲ

ಕಲರ್ ಕಮ್ಮಿ ಇದ್ರೆ
ಲಕ್ಷ್ಣಣ ವಾಗಿಲ್ಲ ಅಂತ
ಹೇಳೋ ಹಾಗೇ ಇಲ್ಲಾ

ಸಿಕ್ ಸಿಕ್ ದೇವ್ರನೆಲ್ಲಾ ಒಳ್ಳೆ ಹುಡುಗಿ ಸಿಗ್ಲಪ್ಪಾ
ಅಂತ ಬೇಡಿಕೊಂಡರು
ಅವನ್ ಏನ್ ಸೃಷ್ಟಿ ಮಾಡೋಕಾಗಲ್ಲ

ಹಣೆಬರಹದಲ್ಲಿ ಇಂತಳೇ
ಸಿಗೋದು  ಅಂತ ಇದ್ರೆ
ಯಾರಿಂದಲೂ  ತಪ್ಸೋಕಾಗಲ್ಲ !

Thursday, February 14, 2013

ಪುನರಾಗಮನ

 
ಬಾಡಿದ ಮನಸಿಗೆ
ತುಂತುರು
ಮಳೆ ಹನಿ
ಬಿದ್ದಂಗ್ ಅಯ್ತು
ನಿನ್ನ
ಪುನರಾಗಮನ .!

ಹೃದಯದಿ ಪುನಃ
ಪ್ರೀತಿಯ
ಕೃಷಿ
ಶುರುವಾಗಿ
ಹಸಿರಾಗುವುದೇ
ನನ್ನ ಜೀವನ .!!

Monday, February 4, 2013

ಕಾಯುತಿರುವೆನು




ಪ್ರಿತಿಸಿದವಳು
ಮರೆಯಾದಳು
ಸ್ವರ್ಗದಿಂದ
ಕರೆ ಬಂದಿತೆಂದು !

ಅವಳ
ನೆನಪಲ್ಲೇ
ಕಾಯುತಿರುವೆನು
ನನಗೂ  ಆಹ್ವಾನ
ಕಳಿಸುವಳೆಂದು !!

Tuesday, January 29, 2013

ಹೃದಯ


ಸೂರ್ಯನ ಕೆರಳಿದ ಕಿರಣಗಳಿಗೆ 
ತಾಗದಂತೆ ಎದೆಯಲ್ಲಿ
ಇಟ್ಟು ರಕ್ಷಿಸಿದೆ ನಿನ್ನನು

ಛಡಿ ಮಳೆಯ ರೌದ್ರ ನರ್ತನಕೆ
ನೆನೆಯದಂತೆ ನಡೆಸಿದೆ ನಿನ್ನನು

ತಂಡಿ ಚಳಿ ಗಾಳಿಗೆ ,ಮಂಡ
ಬಿರುಗಾಳಿಯ ಸುಳಿಗೆ
ಸಿಲುಕದಂತೆ ತಡೆದೆ  ನಿನ್ನನು

ಗುಡಿ ಗೋಪುರ ಕಟ್ಟದಿದ್ದರು
ಪೂಜೆ ಪುನಸ್ಕಾರ ಮಾಡದಿದ್ದರೂ
ಮನಸಾಕ್ಷಿಯ ಮಂತ್ರದಿಂದ ಆರದಿಸಿದೆ

ಹರೆಯದ ವಯಸ್ಸಿನಲ್ಲಿ  ಹುಚುಕೊಡಿ
 ಮನಸು ಚಂಚಲ ಬುದ್ದಿಗೆ
ಬಲಿಯಾಗಲು ಬಿಡಲಿಲ್ಲ ನಿನ್ನನು

ಪ್ರೀತಿಗೆ ವಿಶ್ವಾಸದಿಂದ ,ಸ್ನೇಹಕೆ
 ನಂಬಿಕೆಯಿಂದ
ಸಂಬಂದದಿ ಅನುಬಂದದಿಂದಿರಲು
ಕಲಿಸಿದೆ ನಿನ್ನನು

ನಿನ್ನ ಆಸೆ ನನ್ನ ಕನಸಿನಲಿ  ನಿರಾಸೆ
ಮನಸಿನಲಿ
ಸುಖ  ನನ್ನ ಆನಂದ ಬಾಷ್ಪದಲ್ಲಿ  ದುಃಖ
ಕಣ್ಣಿರಿನಲ್ಲಿ
ನಿನ್ನ ತುಡಿತ ನನ್ನ ಬಡಿತದಲ್ಲಿ ಮಿಡಿತ
  ನಾಡಿಗಳಲ್ಲಿ

ನೀ ಕಾಣದಿದ್ದರೂ
ನಿನ್ನ  ಬಾವನೆಗಳನು ನನ್ನ ಮುಕದಲಿ
ತೋರ್ಪಡಿಸಿದೆ

ನೀ ಸದಾ ಬಡಿಯುತಿದ್ದರೆ ಮಾತ್ರ
ನನ್ನ ಜೀವನಕೆ ಶಕ್ತಿ
ನೀ ಮೌನಕೆ ಶರಣಾದರೆ  ಅಂದೇ
ನನ್ನ ಸಾವು ಕಟ್ಟಿಟ್ಟ  ಬುತ್ತಿ