ಬಾವನೆಗಳ ಸಂತೆಯಲ್ಲಿ ನಾನು
-
Friday, May 15, 2020
Sunday, April 26, 2020
Tuesday, January 7, 2014
Monday, November 25, 2013
ರಾಜ್ಯೋ ತ್ಸವ
ನವೆಂಬರ್ ಬಂತೆಂದರೆ ಬೀದಿ ಬೀದಿಗಳಲ್ಲಿ
ಕನ್ನಡ ರಾಜ್ಯೋ ತ್ಸವದ
ಸಂಬ್ರಮ ಸಡಗರ
ರಸ್ತೆಯ ಉದ್ದಗಲಕ್ಕೂ ಹಳದಿ ,ಕೆಂಪು ಬಣ್ಣದ
ತಳಿರು ತೋರಣಗಳಿಂದ ಸಿಂಗಾರ
ಅಂದು ಮಠ ,ಮಂದಿರ ,ಆಸ್ಪತ್ರೆ
ಶಾಲೆಗಳ ಅರಿವಿಲ್ಲದೆ
ದ್ವನಿ ವರ್ದಕಗಳ ಅಬ್ಬರ
ಎಂದು ನೆನೆಯದ ಕವಿಗಳ ,ಹಿರಿಯರ ಹಾಗು
ಭುವನೇಶ್ವರಿ ದೇವಿ
ಫೋಟೋಗಳಿಗೆ ಹೂವಿನ ಅಲಂಕಾರ
ತಮಗೆ ಇಷ್ಟವಾದ ಅಯೋಗ್ಯರಿಗೆ
ರಾಜಕೀಯ ಪುಡಾರಿಗಳಿಗೆ
ಕನ್ನಡ ಪಲಕಗಳೊಂದಿಗೆ ಪುರಸ್ಕಾರ
ಪಟಾಕಿ ಸಿಡಿಮದ್ದು ಸಿಡಿಸಿ ಪ್ಲಾಸ್ಟಿಕ್
ಬಾವುಟಗಳನ್ನು ಹಾರಿಸಿ
ಪರಿಸರ ಕಾಳಜಿ ಇಲ್ಲದವರ ಹಾಹಾಕಾರ
ನಾಡು ,ನುಡಿ ,ಕಲೆ ,ಸಂಸೃತಿಯ ಬಗ್ಗೆ
ಗಂಬೀರ ಚಿಂತನೆ ಇಲ್ಲದೆ
ಎಲ್ಲೆಲ್ಲೂ ನಟ ನಟಿಯರ ರಸಮಂಜರಿಯ ಚಿತ್ಕಾರ
ಇದು ಇಂದಿನ ಪೀಳಿಗೆಯ ಕನ್ನಡ ಅಬಿಮಾನಿಗಳು
ಕನ್ನಡಾಂಬೆ ಹೆಸರಿನಲ್ಲಿ ಮಾಡುವ ಸುಲಿಗೆ
ರಾಜ್ಯೋ ತ್ಸವ ನೆಪದಲ್ಲಿ ಮಾಡುವ ದಂಧೆ.
Thursday, November 21, 2013
ಟೆಲಿಕಾಂ
ನಾವಿರೋದಂತು ಪಕ್ಕಾ ಟೆಲಿಕಾಂ
I&C,ನೆಟ್ ವರ್ಕ್ ಇಂಪ್ಲ್ಲ್ಲಿಮೆಂಟ್ಶಟೇಷನ್ ನಮ್ ಕಾಮ್
ಹೇಳೋ ತರ ಎನಿರೋಲ್ಲ ನಮ್ ಇನ್ಕಮ್
ಕೆಳ್ದೊರಿಗೆ ಹೇಳ್ತಿವಿ ಲಮ್ ಸಮ್
ಊರು, ಕೇರಿ, ಗಲ್ಲಿ ಗಲ್ಲಿ, ದೇಶ ಸುತ್ತೋದೆ
ನಮಗೆ ಸಿಗೋ ಅದ್ರುಷ್ಟ
ಬ್ಯಾಚುಲರ್ ಲೈಫ್ ನಲ್ಲಿ ತಿರುಗಾಡೋದಕ್ಕೆ
ಮಾತ್ರ ಬಲು ಇಷ್ಟ
ಏನೇ ಅಂದ್ರು ಮನೆ ಮಠ ಬಿಟ್ಟು ಈ
ಅಲೆಮಾರಿ ಜೀವನ ಒಂತರಾ ಕಷ್ಟ
ಇದರಲ್ಲಿ ಬೆಳಿಬೇಕು ಅಂದ್ರೆ ಸ್ವಲ್ಪ
ತಲೆ ಓಡಿಸಬೇಕು
ದುಡಿಬೇಕು ಅಂದ್ರೆ ಬಾಡಿ ಮೈನ್ ಟೈನ್
ಮಾಡಿರಬೇಕು
ಹಣ ಉಳಿತಾಯ ಮಾಡಬೇಕು ಅಂದ್ರೆ
ಚಾಲಾಕಿತನ ತೋರಿಸಬೇಕು
ಜೊತೆಗೆ ಅಡ್ಡ ದಾರಿನು ತಿಳ್ಕೊಂಡಿರ ಬೇಕು
ಟೈಮ್ ನೋಡಿ use ಮಾಡ್ಕೊಬೇಕು
ನಿನ್ ಹೆಲ್ತ್ ನೀನೇ ನೋಡ್ಕೋಬೇಕು ಹೊರಗೆ
ತಿನ್ನೋದು ,ಕುಡಿಯೋದ್ರಲ್ಲಿ
ಕೆಲಸ ಮಾಡ್ಬೇಕಾದ್ರೆ ಸೇಫ್ಟಿ ರೂಲ್ಸ್ ಫಾಲೋ
ಮಾಡಬೇಕು ಸೈಟ್ ನಲ್ಲಿ
ಯಮಾರಿದ್ರೆ ಅಡ್ರೆಸ್ ಗೆ ಇಲ್ಲದಂಗೆ ಏನಾಗ್ತಿಯಾ
ಅಂತ ಗೊತ್ತೇ ಆಗೋಲ್ಲ
ಮೊದಲೇ ಹೆಲ್ತ್ ಇನ್ಸುರೆನ್ಸ್ ಇಲ್ಲದ ಕಂಪನಿಗಳು
ಯಾವ MD,ED & HR ನು ಎನಾಗಿದಿಯಾ
ಅಂತ ಮೂಸಿ ಕೂಡ ನೋಡಲ್ಲ.
Saturday, August 17, 2013
Tuesday, August 6, 2013
Subscribe to:
Posts (Atom)