ನವೆಂಬರ್ ಬಂತೆಂದರೆ ಬೀದಿ ಬೀದಿಗಳಲ್ಲಿ
ಕನ್ನಡ ರಾಜ್ಯೋ ತ್ಸವದ
ಸಂಬ್ರಮ ಸಡಗರ
ರಸ್ತೆಯ ಉದ್ದಗಲಕ್ಕೂ ಹಳದಿ ,ಕೆಂಪು ಬಣ್ಣದ
ತಳಿರು ತೋರಣಗಳಿಂದ ಸಿಂಗಾರ
ಅಂದು ಮಠ ,ಮಂದಿರ ,ಆಸ್ಪತ್ರೆ
ಶಾಲೆಗಳ ಅರಿವಿಲ್ಲದೆ
ದ್ವನಿ ವರ್ದಕಗಳ ಅಬ್ಬರ
ಎಂದು ನೆನೆಯದ ಕವಿಗಳ ,ಹಿರಿಯರ ಹಾಗು
ಭುವನೇಶ್ವರಿ ದೇವಿ
ಫೋಟೋಗಳಿಗೆ ಹೂವಿನ ಅಲಂಕಾರ
ತಮಗೆ ಇಷ್ಟವಾದ ಅಯೋಗ್ಯರಿಗೆ
ರಾಜಕೀಯ ಪುಡಾರಿಗಳಿಗೆ
ಕನ್ನಡ ಪಲಕಗಳೊಂದಿಗೆ ಪುರಸ್ಕಾರ
ಪಟಾಕಿ ಸಿಡಿಮದ್ದು ಸಿಡಿಸಿ ಪ್ಲಾಸ್ಟಿಕ್
ಬಾವುಟಗಳನ್ನು ಹಾರಿಸಿ
ಪರಿಸರ ಕಾಳಜಿ ಇಲ್ಲದವರ ಹಾಹಾಕಾರ
ನಾಡು ,ನುಡಿ ,ಕಲೆ ,ಸಂಸೃತಿಯ ಬಗ್ಗೆ
ಗಂಬೀರ ಚಿಂತನೆ ಇಲ್ಲದೆ
ಎಲ್ಲೆಲ್ಲೂ ನಟ ನಟಿಯರ ರಸಮಂಜರಿಯ ಚಿತ್ಕಾರ
ಇದು ಇಂದಿನ ಪೀಳಿಗೆಯ ಕನ್ನಡ ಅಬಿಮಾನಿಗಳು
ಕನ್ನಡಾಂಬೆ ಹೆಸರಿನಲ್ಲಿ ಮಾಡುವ ಸುಲಿಗೆ
ರಾಜ್ಯೋ ತ್ಸವ ನೆಪದಲ್ಲಿ ಮಾಡುವ ದಂಧೆ.
No comments:
Post a Comment