Monday, November 25, 2013

ರಾಜ್ಯೋ ತ್ಸವ

 
ನವೆಂಬರ್  ಬಂತೆಂದರೆ ಬೀದಿ ಬೀದಿಗಳಲ್ಲಿ 
ಕನ್ನಡ ರಾಜ್ಯೋ ತ್ಸವದ 
ಸಂಬ್ರಮ ಸಡಗರ 
ರಸ್ತೆಯ ಉದ್ದಗಲಕ್ಕೂ ಹಳದಿ ,ಕೆಂಪು ಬಣ್ಣದ 
ತಳಿರು  ತೋರಣಗಳಿಂದ ಸಿಂಗಾರ 

ಅಂದು ಮಠ ,ಮಂದಿರ ,ಆಸ್ಪತ್ರೆ 
ಶಾಲೆಗಳ ಅರಿವಿಲ್ಲದೆ 
ದ್ವನಿ ವರ್ದಕಗಳ ಅಬ್ಬರ 

ಎಂದು ನೆನೆಯದ ಕವಿಗಳ ,ಹಿರಿಯರ ಹಾಗು 
ಭುವನೇಶ್ವರಿ ದೇವಿ
 ಫೋಟೋಗಳಿಗೆ ಹೂವಿನ ಅಲಂಕಾರ 

ತಮಗೆ ಇಷ್ಟವಾದ  ಅಯೋಗ್ಯರಿಗೆ 
ರಾಜಕೀಯ ಪುಡಾರಿಗಳಿಗೆ
ಕನ್ನಡ ಪಲಕಗಳೊಂದಿಗೆ ಪುರಸ್ಕಾರ 

ಪಟಾಕಿ ಸಿಡಿಮದ್ದು ಸಿಡಿಸಿ ಪ್ಲಾಸ್ಟಿಕ್
 ಬಾವುಟಗಳನ್ನು ಹಾರಿಸಿ 
ಪರಿಸರ ಕಾಳಜಿ ಇಲ್ಲದವರ ಹಾಹಾಕಾರ  

 ನಾಡು ,ನುಡಿ ,ಕಲೆ ,ಸಂಸೃತಿಯ ಬಗ್ಗೆ
 ಗಂಬೀರ ಚಿಂತನೆ ಇಲ್ಲದೆ 
ಎಲ್ಲೆಲ್ಲೂ ನಟ ನಟಿಯರ ರಸಮಂಜರಿಯ ಚಿತ್ಕಾರ
 
ಇದು ಇಂದಿನ ಪೀಳಿಗೆಯ ಕನ್ನಡ ಅಬಿಮಾನಿಗಳು 
ಕನ್ನಡಾಂಬೆ ಹೆಸರಿನಲ್ಲಿ ಮಾಡುವ ಸುಲಿಗೆ 
ರಾಜ್ಯೋ ತ್ಸವ ನೆಪದಲ್ಲಿ  ಮಾಡುವ ದಂಧೆ.

Thursday, November 21, 2013

ಟೆಲಿಕಾಂ



ನಾವಿರೋದಂತು  ಪಕ್ಕಾ ಟೆಲಿಕಾಂ
I&C,ನೆಟ್ ವರ್ಕ್ ಇಂಪ್ಲ್ಲ್ಲಿಮೆಂಟ್ಶಟೇಷನ್ ನಮ್ ಕಾಮ್
ಹೇಳೋ ತರ ಎನಿರೋಲ್ಲ ನಮ್ ಇನ್ಕಮ್
ಕೆಳ್ದೊರಿಗೆ ಹೇಳ್ತಿವಿ ಲಮ್ ಸಮ್

ಊರು, ಕೇರಿ, ಗಲ್ಲಿ ಗಲ್ಲಿ, ದೇಶ  ಸುತ್ತೋದೆ
ನಮಗೆ ಸಿಗೋ ಅದ್ರುಷ್ಟ
ಬ್ಯಾಚುಲರ್  ಲೈಫ್ ನಲ್ಲಿ ತಿರುಗಾಡೋದಕ್ಕೆ
ಮಾತ್ರ ಬಲು ಇಷ್ಟ
ಏನೇ ಅಂದ್ರು ಮನೆ ಮಠ  ಬಿಟ್ಟು ಈ
ಅಲೆಮಾರಿ ಜೀವನ ಒಂತರಾ  ಕಷ್ಟ

ಇದರಲ್ಲಿ ಬೆಳಿಬೇಕು  ಅಂದ್ರೆ ಸ್ವಲ್ಪ
ತಲೆ ಓಡಿಸಬೇಕು
ದುಡಿಬೇಕು ಅಂದ್ರೆ ಬಾಡಿ ಮೈನ್ ಟೈನ್
 ಮಾಡಿರಬೇಕು

ಹಣ ಉಳಿತಾಯ ಮಾಡಬೇಕು  ಅಂದ್ರೆ
 ಚಾಲಾಕಿತನ ತೋರಿಸಬೇಕು
ಜೊತೆಗೆ ಅಡ್ಡ ದಾರಿನು ತಿಳ್ಕೊಂಡಿರ ಬೇಕು
ಟೈಮ್ ನೋಡಿ use ಮಾಡ್ಕೊಬೇಕು

ನಿನ್ ಹೆಲ್ತ್  ನೀನೇ ನೋಡ್ಕೋಬೇಕು ಹೊರಗೆ
ತಿನ್ನೋದು ,ಕುಡಿಯೋದ್ರಲ್ಲಿ
ಕೆಲಸ ಮಾಡ್ಬೇಕಾದ್ರೆ ಸೇಫ್ಟಿ ರೂಲ್ಸ್ ಫಾಲೋ
ಮಾಡಬೇಕು ಸೈಟ್ ನಲ್ಲಿ

ಯಮಾರಿದ್ರೆ ಅಡ್ರೆಸ್ ಗೆ ಇಲ್ಲದಂಗೆ ಏನಾಗ್ತಿಯಾ
ಅಂತ ಗೊತ್ತೇ  ಆಗೋಲ್ಲ
ಮೊದಲೇ  ಹೆಲ್ತ್ ಇನ್ಸುರೆನ್ಸ್ ಇಲ್ಲದ ಕಂಪನಿಗಳು
ಯಾವ MD,ED & HR ನು ಎನಾಗಿದಿಯಾ
ಅಂತ ಮೂಸಿ ಕೂಡ ನೋಡಲ್ಲ.

Saturday, August 17, 2013

ಘಾಸಿ


ಕುರುಡು ಭವಿಷ್ಯ
 ಕತ್ತಲಾವರಿಸಿದಾಗ
ಹಲ್ಲೆ ಮಾಡಿತೊಂದು 
 ಸುಳ್ಳು ಮಾತು !

ತೀವ್ರ ಘಾಸಿಗೊಳಗಾಗಿತು 
 ಮನಸು
ಕಂಗಾಲಾಗಿ ಮೌನಕೆ
 ಶರಣಾಯಿತು ಹೃದಯ !!

Tuesday, August 6, 2013

ಚದುರಿದ ಕನಸುಗಳು



1

ಕಂಡ ಕನಸುಸೊಂದು
 ನಿಜವಾಗಿತ್ತು
ನನಸಾಗಿಸಲು ಮಾತಾಡಿ
 ಬಂದಿದಾಗಿತ್ತು
ಕಣ್ಣು ತೆರೆದು ನೋಡಿದಾಗ
ಬೆಳಕಾಗಿತ್ತು

2

ಮಳೆ ಬಂದು ಮನಸು
ತಂಪಾಗುತ್ತದೆ ಎನಿಸಿತು
ತಕ್ಷಣ
ಕಾಮನ ಬಿಲ್ಲು ಮೂಡಿ
ಕಣ್ಣು ಕಟ್ಟಿದಂತಾಯಿತು

Monday, July 29, 2013

ದೂರದೂರಿಗೆ



ಕನಸಿನ ಮೊಟೆಯನ್ನು ಹೊತ್ತುಕೊಂಡು
ಮರಳಿ ಬಂದೆ
ಆಕಾಶದಲ್ಲಿ ತೇಲುವಂತೆ

೩ ದಿನದೊಳಗೆ ಕರೆ ಬಂದಿತು
ಕಣ್ಣಿರಿನ ಹನಿ ಜಾರುವಂತೆ

ಕೆಲಸದ ಒತ್ತಡವು ಕೇಕೆ ಹಾಕುತಿತ್ತು
ಕನಸು ಕಮರಿ ಹೋಗುವಂತೆ

ಮನಸಿಲ್ಲದೇ ಹೊರಟಿದೆ ಕಾಯವು
ದೂರದೂರಿಗೆ
ಕಾಯಕವ ಬೆನ್ನತ್ತಿಕೊಂಡು

ಭವಿಷ್ಯದಲ್ಲಿ ನನಗು ಉತ್ತಮ ದಿನಗಳು
ಬರುತ್ತವೆ
ಎಂಬ ನಿರೀಕ್ಷೆ ಇಟ್ಟುಕೊಂಡು .....

Monday, July 8, 2013

ಕಣ್ಣೋಟ


ಹೆಣ್ಣೇ..!
ನಿನ್ನ ಕಣ್ಣಿನ ನೋಟ
ರಾಮನ ಬಾಣಕ್ಕಿಂತ
ಬಲು ತೀಕ್ಷ್ಣ !

ಒಮ್ಮೆ ದೃಷ್ಟಿ ಹರಿಸಿದರೆ ಸೀಳುವುದು
ಗಂಡಿನ ಹೃದಯ
ಆ ಕ್ಷಣ !!

Friday, June 28, 2013

मेरे मनपसंद


जिंदगी युही चलती रहेगी
सुख दुख के जुगलबंदी के साथ
भगवान ने बनाये हुए रास्ते पे

कुछ लोग मिलते है
कुछ लोग बिछड जाते है
फिर भी जिंदगी युही चलती रहेगी

मेरे मनपसंद है आप लोग
भूल नाही जा सकते हे कभीभी
हमेशा मेरे छोटेसे दिल मे
 याद बनके रहोगे .....

Tuesday, June 25, 2013

ಕಪ್ಪು


ಮೋಡ ಕಪ್ಪಾದಾಗಲೇ
ಮಳೆಯು  ಭೂಮಿಗೆ  ಚುಂಬಿಸುವುದು

ಕಾಡಿಗೆ ಕಣ್ಣಂಚಲಿ ಕಂಡಾಗಲೇ
ಕಣ್ಣಿನ ಅಂದ ಹೆಚ್ಚುವುದು

ರಾತ್ರಿಯಲಿ ಕತ್ತಲು ಅವರಿಸಿದಾಗಲೇ
ಬೆಳದಿಂಗಳ ಸೊಬಗು ಕಾಣುವುದು

ಕಲ್ಲಿದ್ದಲು ಕಾದು  ಕೆಂಪಾದಾಗಲೇ
ಚಿನ್ನ ಕರಗಿ ಅಭರಣವಾಗಿ ಆಕರ್ಷಿಸುವುದು

ನೋಡಿದವರು  ಕಪ್ಪಗಿದ್ದರೆನಂತೆ
ನೆಡೆ,ನುಡಿ, ನೋಟವೂ  ಕಪ್ಪಿರುತ್ತದೆಯೇ ?

ಮುಖದಲ್ಲಿ ಬಣ್ಣ ಕಮ್ಮಿಯಾದರೆ
ಅವರ ಲಕ್ಷಣ ,ಮನಸು ಮಾಸಿ ಹೋಗಿರುವುದೇ?

 ಬಣ್ಣಕ್ಕೆ  ಮಹತ್ವ ಕೊಡುವುದಾದರೆ
ವ್ಯಕ್ತಿಯ ಬಾವನೆಗಳಿಗೆ ಬೆಲೆನೇ ಇಲ್ಲವೇ ?

Wednesday, June 5, 2013

ಸಿನಿಮಾ


ಗುಂಡಿನಲ್ಲಿರೋ  ಗಮ್ಮತ್ತು
ಕಿಸ್ ನಲ್ಲಿರುವ ಕಿಮ್ಮತ್ತು
ಪಲ್ಲಂಗದ ಮೇಲಿರುವ ನಿಯತ್ತು

ನಟಿಯರ ಮಾದಕ ಮೈಕಟ್ಟು
ಹೀರೋ ಗಳ ಬಾಡಿಯ ಬಿಕ್ಕಟ್ಟು
ಅಶ್ಲೀಲ ಸಂಭಾಷಣೆಗಳ ನಿಘಂಟು

ಇಷ್ಟೆಲ್ಲಾ  ಗಮನದಲ್ಲಿ ಇಟ್ಕೊಂಡು
ಹಸಿ  ಬಿಸಿಯಾಗಿ ತೋರಿಸೋದೇ
ನಿರ್ದೇಶಕನ ಕಸರತ್ತು

ರಿಯಲ್ ಎಸ್ಟೇಟ್  ಮಾಡ್ಕೊಂಡು
ಪಿಕ್ಚರ್ ಗೆ  ಬಂಡವಾಳ ಹಾಕ್ಕೊಂಡು
ಲಾಭ ಗಳಿಸೋಕೆ ನಿರ್ಮಾಪಕನ ಮಸಲತ್ತು

ಈ  ತರಹದ ಸಿನಿಮಾಗಳು ಯುವ ಪೀಳಿಗೆಗೆ
ಕನ್ನಡ ಚಿತ್ರರಂಗಕ್ಕೆ ಖಂಡಿತಾ ಆಪತ್ತು ..

Monday, May 27, 2013

ಜನ್ಮ ಕುಂಡಲಿ


ಮರೆಯದ ನೆನಪೊಂದು
 ಅಚ್ಚಳಿಯದೇ ಉಳಿದಿದೆ
ಹೃದಯದ ಪಂಜರದಲ್ಲಿ

ಬೆಸೆಯುವ ಸಂಬಂಧ
ಬರಿದಾಗಿ ಹೋಯಿತು
ಜಾತಕದ ಜಂಜಾಟದಲ್ಲಿ

ಪ್ರೀತಿಸುವ ಮನಸೊಂದು
ನೂರಾರು ಆಸೆಗಳನು
ಬದಿಗೊತ್ತಿ  ಬಲಿಪಶುವಾಯಿತು
ರಾಹು ಕೇತುವಿನ ಸ್ಥಾನ ಪಲ್ಲಟದಲ್ಲಿ

ಹೃದಯದ ಬಾವನೆಗಳಿಗೆ
ಕಾಣುವ  ಕನಸುಗಳಿಗೆ
ಅರ್ಥವೇ ಇಲ್ಲದಂತಾಯಿತು
ಜನ್ಮ ಕುಂಡಲಿಗಳು ಸೇರುವುದರಲ್ಲಿ .

Monday, April 22, 2013

ಕೆನೆ ಪದರ


ಭರವಸೆಯ ಬಾವನೆಗಳು ಭಾರವಾಗಿ
ಬಾಡಿದೆ ನಿನ್ನ ಮುಖ
ಕಮರಿಹೋದ ಕನಸುಗಳಿಗೆ ಭಾವುಕವಾಗಿ
ಕಪ್ಪಿಡುತಿವೆ  ಕಣ್ಣುಗಳು

ಅಕಾಲಿಕೆಯ ಅಗಲಿಕೆ ಅಕ್ಕರೆ
ಆತ್ಮ ದಿಂದ
ಇಂಚು ಇಂಚಾಗಿ ಕರಗುತಿದೆ ಮಾಗಿದ
ಮನಸುಗಳು

ವಾಸ್ತವಿಕ ಬದುಕಿನಲಿ ಛಲದಿಂದಿರುವರು
ನೀನಿರುವೆಯೆಂದು 
ಹೆಚ್ಚಾಗಿ ಸಹಕರಿಸಲಿ ಉತ್ಸಾಹದ ಕನಸುಗಳು
ಧೃತಿಗೆಡದಿರಲೆಂದು


ಮಡಿದ ಮನಸಿಗೆ ಮನಶಾಂತಿ ಕೊಡುವುದೇ
ಮಮತೆಯ ನಿನ್ನ ಆಕ್ರಂದನ
ಅವರ ಅಶಾ ಮಾರ್ಗಗಳಿಗೆ ಬೆಳಕಾಗು 
ನೀ ಕತ್ತಲೆಯ ಕಾರ್ಮೋಡ ಕವಿಯಬೇಡ

ನಿಷ್ಟೆ ಇಲ್ಲದ ಅನಿಷ್ಟ ಪದ್ದತಿಯಿಂದ ಎಳೆಯ
ಪ್ರಾಣಕೆ ಸಂಚಕಾರ ತಂದವರು
ಮರೆತು ಬಿಡು ಜೀವನದ ಜೊತೆ ಚೆಲ್ಲಾಟ ಆಡುವವರನ್ನು
ಆ ದೇವರಿದ್ದಾನೆ ಅವರ ವಿಧಿಯಾಟವಾಡಲು

ಬೇಸಿಗೆಯಲಿ ತರಗೆಲೆಗಳು ಉದುರಿದ ಹಾಗೆ
ಕಳಚಿ ಬೀಳಲಿ ನಿನ್ನ ಕಹಿ ನೆನಪುಗಳು
ನವ ವಸಂತಕೆ  ಹೊಸ ಋತುವಿನ  ಹಾಗೆ
ಮೂಡಲಿ ಸಿಹಿಯಾದ ಕಲ್ಪನೆಗಳು 


ಹರಿದು ಬಿಡು ಹಳೆಯ ಮುಸುಕಾದ ತೊಗಟೆಗಳನ್ನು
ಕನವರಿಸು ಸಾಧನೆಯ ಹಾದಿಯನ್ನು
ತೊರೆದು ಬಿಡು ಇಚ್ಚೆ ಇಲ್ಲದವರ ಸಂಬಂಧವನ್ನು
ಧೈರ್ಯದಿಂದಿರು ಗೆಳೆತನ ಜೊತೆಗಿರುವುದೆಂದು

ಅಕ್ಕರೆಯ ಅಪ್ಪ,ಅಮ್ಮ ಅವರಿಗೆ ಸಕ್ಕರೆಯ
ಸವಿಯಾಗು
ಹಾಲಿನಂತ ಶುಬ್ರ ಮನಸುಗಳಿಗೆ ರಕ್ಷಣೆಯ ಕೆನೆ ಪದರವಾಗು

Friday, April 19, 2013

ಏಕಾಂಗಿ

 
 
ಬೇಡವೇ ಬೇಡ ಬಂದುಗಳ
ಸಂಬಂಧಗಳು

ಈ ಬಂಧನವು  ನನಗೆ  ನುಂಗಲಾರದ
ತುತ್ತುಗಳು

ಸದಾ ಮನಸಿಗೆ ನೋವು ಕೊಡುವ
ಆ ಚುಚ್ಚು ಮಾತುಗಳು

ಸಹಿಸಲಾರೆನು ಈ ಸಂಬಧಗಳ
ಸಂಕೋಲೆಗಳನ್ನು

ಅದಕ್ಕೆಂದೇ ನಾ ಬಯಸಿದೆ
 ಏಕಾಂಗಿತನವನ್ನು .

Thursday, March 21, 2013

ಮಿಸ್ ಕಾಲ್




ಕೈ
 ಕೊಟ್ಟು ಹೊಡಿಹೊದಳು 
ಮೊಬೈಲ್ ಜೊತೆ 
girl Friend
ಮಿಸ್ ಕಾಲ್
ಬೆನ್ನತ್ತಿಕೊಂಡು

ಹೊಸ ಮೊಬೈಲ್
ತೆಗೆದುಕೊಂಡು
wait ಮಾಡುತಿರುವೆನು 
ನನಗೂ
ಮಿಸ್ ಕಾಲ್
ಬರುವುದೆಂದು !

Wednesday, March 20, 2013

ನೋಡೋ ಹುಡುಗಿ


ನೋಡೋ ಹುಡುಗಿಯರೆಲ್ಲಾ
ಚಂದನದ
ಬೊಂಬೆಯಾಗಿರಲ್ಲ

ಸುಂದರವಾಗಿರೋರೆಲ್ಲ
 ನಾವ್
ತಿಳ್ಕೊಂಡಿರೋ ತರ  ಇರೋಲ್ಲ

ಸಿಂಪಲ್ಲಾಗಿ ಇರೋರೆಲ್ಲ
ಸೈಲೆಂಟ್ 
ಅಂತ  ಹೇಳೋಕಾಗಲ್ಲ

ಕಲರ್ ಕಮ್ಮಿ ಇದ್ರೆ
ಲಕ್ಷ್ಣಣ ವಾಗಿಲ್ಲ ಅಂತ
ಹೇಳೋ ಹಾಗೇ ಇಲ್ಲಾ

ಸಿಕ್ ಸಿಕ್ ದೇವ್ರನೆಲ್ಲಾ ಒಳ್ಳೆ ಹುಡುಗಿ ಸಿಗ್ಲಪ್ಪಾ
ಅಂತ ಬೇಡಿಕೊಂಡರು
ಅವನ್ ಏನ್ ಸೃಷ್ಟಿ ಮಾಡೋಕಾಗಲ್ಲ

ಹಣೆಬರಹದಲ್ಲಿ ಇಂತಳೇ
ಸಿಗೋದು  ಅಂತ ಇದ್ರೆ
ಯಾರಿಂದಲೂ  ತಪ್ಸೋಕಾಗಲ್ಲ !

Thursday, February 14, 2013

ಪುನರಾಗಮನ

 
ಬಾಡಿದ ಮನಸಿಗೆ
ತುಂತುರು
ಮಳೆ ಹನಿ
ಬಿದ್ದಂಗ್ ಅಯ್ತು
ನಿನ್ನ
ಪುನರಾಗಮನ .!

ಹೃದಯದಿ ಪುನಃ
ಪ್ರೀತಿಯ
ಕೃಷಿ
ಶುರುವಾಗಿ
ಹಸಿರಾಗುವುದೇ
ನನ್ನ ಜೀವನ .!!

Monday, February 4, 2013

ಕಾಯುತಿರುವೆನು




ಪ್ರಿತಿಸಿದವಳು
ಮರೆಯಾದಳು
ಸ್ವರ್ಗದಿಂದ
ಕರೆ ಬಂದಿತೆಂದು !

ಅವಳ
ನೆನಪಲ್ಲೇ
ಕಾಯುತಿರುವೆನು
ನನಗೂ  ಆಹ್ವಾನ
ಕಳಿಸುವಳೆಂದು !!

Tuesday, January 29, 2013

ಹೃದಯ


ಸೂರ್ಯನ ಕೆರಳಿದ ಕಿರಣಗಳಿಗೆ 
ತಾಗದಂತೆ ಎದೆಯಲ್ಲಿ
ಇಟ್ಟು ರಕ್ಷಿಸಿದೆ ನಿನ್ನನು

ಛಡಿ ಮಳೆಯ ರೌದ್ರ ನರ್ತನಕೆ
ನೆನೆಯದಂತೆ ನಡೆಸಿದೆ ನಿನ್ನನು

ತಂಡಿ ಚಳಿ ಗಾಳಿಗೆ ,ಮಂಡ
ಬಿರುಗಾಳಿಯ ಸುಳಿಗೆ
ಸಿಲುಕದಂತೆ ತಡೆದೆ  ನಿನ್ನನು

ಗುಡಿ ಗೋಪುರ ಕಟ್ಟದಿದ್ದರು
ಪೂಜೆ ಪುನಸ್ಕಾರ ಮಾಡದಿದ್ದರೂ
ಮನಸಾಕ್ಷಿಯ ಮಂತ್ರದಿಂದ ಆರದಿಸಿದೆ

ಹರೆಯದ ವಯಸ್ಸಿನಲ್ಲಿ  ಹುಚುಕೊಡಿ
 ಮನಸು ಚಂಚಲ ಬುದ್ದಿಗೆ
ಬಲಿಯಾಗಲು ಬಿಡಲಿಲ್ಲ ನಿನ್ನನು

ಪ್ರೀತಿಗೆ ವಿಶ್ವಾಸದಿಂದ ,ಸ್ನೇಹಕೆ
 ನಂಬಿಕೆಯಿಂದ
ಸಂಬಂದದಿ ಅನುಬಂದದಿಂದಿರಲು
ಕಲಿಸಿದೆ ನಿನ್ನನು

ನಿನ್ನ ಆಸೆ ನನ್ನ ಕನಸಿನಲಿ  ನಿರಾಸೆ
ಮನಸಿನಲಿ
ಸುಖ  ನನ್ನ ಆನಂದ ಬಾಷ್ಪದಲ್ಲಿ  ದುಃಖ
ಕಣ್ಣಿರಿನಲ್ಲಿ
ನಿನ್ನ ತುಡಿತ ನನ್ನ ಬಡಿತದಲ್ಲಿ ಮಿಡಿತ
  ನಾಡಿಗಳಲ್ಲಿ

ನೀ ಕಾಣದಿದ್ದರೂ
ನಿನ್ನ  ಬಾವನೆಗಳನು ನನ್ನ ಮುಕದಲಿ
ತೋರ್ಪಡಿಸಿದೆ

ನೀ ಸದಾ ಬಡಿಯುತಿದ್ದರೆ ಮಾತ್ರ
ನನ್ನ ಜೀವನಕೆ ಶಕ್ತಿ
ನೀ ಮೌನಕೆ ಶರಣಾದರೆ  ಅಂದೇ
ನನ್ನ ಸಾವು ಕಟ್ಟಿಟ್ಟ  ಬುತ್ತಿ